10 ಕೋಟಿ ಕೋಡ್ತೀನಿ ಸೀಡಿ ಬಿಡಬೇಡಿ : ನಿತ್ಯಾ

Swami Nithyananda
ಬೆಂಗಳೂರು, ಜ. 5 : ರಂಜಿತಾ ಮಾಧ್ಯಮದ ಮುಂದೆ ಬಂದು ಹೋದ ನಂತರ ಸ್ವಾಮಿ ನಿತ್ಯಾನಂದನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತರತರಹದ ಕಥೆಗಳು ಹೊರ ಬರತೊಡಗಿವೆ. ಸೀಡಿಯಲ್ಲಿರುವುದು ನಿತ್ಯಾ-ರಂಜಿತಾ ಎಂದು ಸ್ಪಷ್ಟಪಡಿಸಿದ್ದ ಸಿಐಡಿ ಅಧಿಕಾರಿಗಳು, ಇದೀಗ ಇನ್ನೊಂದು ರಹಸ್ಯವನ್ನು ಬಯಲುಗೊಳಿಸಿದ್ದಾರೆ.

ರಾಸಲೀಲೆಯ ಸೀಡಿಗಳು ಮಾಧ್ಯಮಗಳ ಕೈಗೆ ಸಿಗುವುದಕ್ಕಿಂತೂ ಮುಂಚೆ ಪತ್ರಕರ್ತನೊಬ್ಬ ವಕೀಲನೊಂದಿಗೆ ರಾಸಲೀಲೆಯ ಸೀಡಿಗಳನ್ನು ಕೈಯಲ್ಲಿಟ್ಟುಕೊಂಡು 25 ಕೋಟಿ ರುಪಾಯಿಗಳಿಗೆ ಡಿಮ್ಯಾಂಡ್ ಮಾಡಿದ್ದ. ಸೀಡಿಯನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಚೌಕಾಶಿಗಿಳಿದ ನಿತ್ಯಾನಂದ 10 ಕೋಟಿ ರುಪಾಯಿಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದ. ಯಾವ ಕಾರಣಕ್ಕೂ ಟಿವಿಗಳಿಗೆ ಸೀಡಿಗಳನ್ನು ನೀಡಬಾರದು ಎಂದು ಷರತ್ತು ಬೇರೆ ವಿಧಿಸಿದ್ದ ಎನ್ನುವ ಸಂಗತಿಯನ್ನು ಸ್ವತಃ ನಿತ್ಯಾನಂದ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ನಿತ್ಯಾನಂದ ಸೀಡಿಯಲ್ಲಿರುವುದು ಸುಳ್ಳು ಎನ್ನುವುದಾದರೆ, ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ನೀಡಲು ಒಪ್ಪಿಕೊಂಡಿದ್ದಾದರೂ ಏಕೆ ? ತಪ್ಪೆ ಮಾಡದಿದ್ದರೆ ನೇರವಾಗಿ ಪತ್ರಕರ್ತ ಹಾಗೂ ವಕೀಲನ ವಿರುದ್ಧ ಮೊಕದ್ದಮೆ ದಾಖಲಿಸಬೇಕಿತ್ತು. ಇದ್ಯಾವುದನ್ನೂ ನಿತ್ಯಾನಂದ ಮಾಡಿಲ್ಲ. ಹೀಗಾಗಿ ಸೀಡಿಯಲ್ಲಿರುವುದು ನಿತ್ಯಾನಂದ ರಂಜಿತಾ ಅಲ್ಲದೇ ಮತ್ಯಾರು ಇರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಸಲೀಲೆ ಹಗರಣ ಬೆಳಕಿಗೆ ಬಂದ ನಂತರವೂ ರಂಜಿತಾಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆ ಎಂದು ನಿತ್ಯಾನಂದ ಒಪ್ಪಿಕೊಂಡಿದ್ದಾನೆ ಎಂದು ಹೇಳಿರುವ ಸಿಐಡಿ ಅಧಿಕಾರಿಗಳು, ಕೋಟಿಗಟ್ಟಲೆ ಹಣ ವಹಿವಾಟು ನಡೆದಿರುವ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ ಎಂದಿದ್ದಾರೆ.(ಸ್ವಾಮಿ ನಿತ್ಯಾನಂದ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+