ಯಾಹೂ, ಡೆಲ್ ಹಿಮ್ಮೆಟ್ಟಿದ ಫೇಸ್ ಬುಕ್

ಗೋಲ್ಡ್ ಮನ್ ಸಾಚ್ ವರದಿಯಂತೆ ಯಾಹೂ 22 ಬಿಲಿಯನ್ ಡಾಲರ್, ಇಬೇ 37 ಬಿಲಿಯನ್ ಡಾಲರ್ ಮೌಲ್ಯ ವುಳ್ಳದ್ದಾಗಿದೆ. ಆದರೆ, ಫೋರ್ಬ್ಸ್ ವರದಿಯಲ್ಲಿ ಫೇಸ್ ಬುಕ್ ಮೌಲ್ಯ 23 ಬಿಲಿಯನ್ ಡಾಲರ್, ಶೇರ್ಸ್ ಪೋಸ್ಟ್ ವರದಿಯಲ್ಲಿ 26.3ಬಿಲಿಯನ್ ಡಾಲತ್ ಹಾಗೂ ಫೈನಾನ್ಸ್ ಟೈಮ್ಸ್ ವರದಿಯಲ್ಲಿ 33 ಬಿಲಿಯನ್ ಮೌಲ್ಯವುಳ್ಳ ಕಂಪೆನಿ ಎಂದು ಹೆಸರಿಸಲಾಗಿದೆ. ಅಲ್ಲದೆ, 83 ಬಿಲಿಯನ್ ಡಾಲರ್ ಮೌಲ್ಯದ ಅಮೆಜಾನ್ ಹಾಗೂ 193 ಮೌಲ್ಯದ ಗೂಗಲ್ ಗೆ ಹೋಲಿಸಿದರೆ ಫೇಸ್ ಬುಕ್ ಇನ್ನೂ ಬಾಲ್ಯಾವಸ್ಥೆಯಲ್ಲಿದೆ ಎನ್ನಲಾಗಿದೆ.
ಫೇಸ್ ಬುಕ್ ನಲ್ಲಿ ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ
ಫೆಬ್ರವರಿ 2009 ರಲ್ಲಿ ಫೇಸ್ ಬುಕ್ ಮೌಲ್ಯ 3.7 ಬಿಲಿಯನ್ ಡಾಲರ್ ಮಾತ್ರ ಇತ್ತು ಎಂದರೆ ಅಚ್ಚರಿಯಾಗುತ್ತದೆ. ನವೆಂಬರ್ 2009ರ ವೇಳೆಗೆ 9.5 ಬಿಲಿಯನ್ ಡಾಲರ್ ಗೆ ಏರಿತು. ಖಾಸಗಿ ಬಂಡವಾಳ ಹೂಡಿಕೆ ಗೊಂದಲ ಹಾಗೂ ಕಂಪೆನಿ ಮೌಲ್ಯ ಧಾರಣೆಯಲ್ಲಿ ಏರುಪೇರು ಇರುವುದನ್ನು ನಿವಾರಿಸಲು ಅತಿದೊಡ್ಡ ಐಪಿಒ ಬಿಡುಗಡೆ ಮಾಡುವ ಮೂಲಕ ಫೇಸ್ ಬುಕ್ ತನ್ನ ಸಮರ್ಥನೆ ನೀಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಫೇಸ್ ಬುಕ್ ಗೆ ರೇಸ್ ನಲ್ಲಿ ಹಿಂದೆ ಬಿದ್ದ ಕೆಲ ಪ್ರಮುಖ ಕಂಪನಿಗಳು:
* ಇಬೇ: 32 ಬಿಲಿಯನ್ ಡಾಲರ್
* ಕಾಸ್ಟ್ ಕೋ: 27.5 ಬಿಲಿಯನ್ ಡಾಲರ್
* ರಿಸರ್ಚ್ ಇನ್ ಮೋಷನ್ : 26 ಬಿಲಿಯನ್ ಡಾಲರ್
* ಡೆಲ್ : 23.8 ಬಿಲಿಯನ್ ಡಾಲರ್
* ಸ್ಟಾರ್ ಬಕ್ಸ್: 19.2 ಬಿಲಿಯನ್ ಡಾಲರ್
* ಯಾಹೂ : 19.1 ಬಿಲಿಯನ್ ಡಾಲರ್
* ಸ್ಟಾಪ್ಲ್ಸ್: 14.8 ಬಿಲಿಯನ್ ಡಾಲರ್
* ಇನ್ ಟ್ಯೂಟ್ : 14.3 ಬಿಲಿಯನ್ ಡಾಲರ್
* ಅಡೋಬ್ : 14 ಬಿಲಿಯನ್ ಡಾಲರ್
ಸಮೀಕ್ಷೆಗಳ ವರದಿಯಲ್ಲಿ ವ್ಯತ್ಯಾಸವಿದ್ದರೂ ಫೇಸ್ ಬುಕ್ ಬೆಳವಣಿಗೆಯನ್ನು ಯಾರೂ ಅಲ್ಲಗೆಳೆಯುತ್ತಿಲ್ಲ. ದೊಡ್ಡ ದೊಡ್ಡ ಕಂಪೆನಿಗಳ ಮಟ್ಟಕ್ಕೆ ತರುವಲ್ಲಿ ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್ ಝಕರ್ ಬರ್ಗ್ ಪಾತ್ರ ಹಿರಿದಾದದು. 26ರ ಹರೆಯದ ಝುಕರ್‌ಬರ್ಗ್ ವಿಶ್ವದ ಅತ್ಯಂತ ಕಿರಿಯ ಬಿಲಿಯಾಧಿಪತಿಯಾಗಿದ್ದು, ಟೈಮ್ ನಿಯತಕಾಲಿಕೆಯ '2010ರ ವರ್ಷದ ವ್ಯಕ್ತಿ"ಯಾಗಿ ಆಯ್ಕೆಯಾಗಿದ್ದರು. [ಫೇಸ್ ಬುಕ್]











Click it and Unblock the Notifications