ಸಂಡೂರಿನಲ್ಲಿ ನಿಗೂಢ ಸ್ಫೋಟ : ನಾಲ್ವರಿಗೆ ಗಾಯ
ಬಳ್ಳಾರಿ,
ಡಿ. 31 : ಸಂಡೂರಿನ ಭಾಗ್ಯಜ್ಯೋತಿ ಕಾಲೋನಿಯಲ್ಲಿ ಶುಕ್ರವಾರ ನಸುಕಿನ 2.20ಕ್ಕೆ ನಿಗೂಢ ಸ್ಪೋಟ ಸಂಭವಿಸಿ ಮಲಗಿದ್ದ ನಾಲ್ವರಿಗೆ ಸುಟ್ಟಗಾಯಗಳಾಗಿದ್ದು, ಅವರೆಲ್ಲರೂ ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋಟದ ಮೂಲ ಪತ್ತೆ ಆಗಿಲ್ಲ. ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. id="toptextpromo">ಈ
ಘಟನೆಯಲ್ಲಿ ಈರಮ್ಮ (32), ತರುಣ್ (11), ಕಮಲ (6) ಮತ್ತೋರ್ವ ಯುವತಿಗೆ ಸುಟ್ಟಗಾಯಗಳಾಗಿವೆ. ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಮನೆಯ ಮೇಲಿನ ಸಿಮೆಂಟ್ ಶೀಟುಗಳು ಛಿದ್ರಛಿದ್ರವಾಗಿ ನಾಲ್ವರಿಗೆ ಬಡಿದು ತೀವ್ರವಾಗಿ ಗಾಯಗೊಳಿಸಿವೆ. ಈರಮ್ಮ ಮತ್ತು ಈಕೆಯ ಪತಿ ಅಜ್ಜಯ್ಯ ಸಾಮಾನ್ಯ ಕೂಲಿ ಕಾರ್ಮಿಕರು. ಮತ್ತು ಈರಮ್ಮ ಟೈಲರಿಂಗ್ ವೃತ್ತಿಯನ್ನು ಕೂಡ ನಡೆಸುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೆ,
ಈ ಭಾಗದಲ್ಲಿ ಕಾಡುಹಂದಿಗಳ ಬೇಟೆ ನಡೆಯುತ್ತಿದ್ದು, ಅವುಗಳನ್ನು ಓಡಿಸಲು ಅಥವಾ ಹೊಡೆಯಲು ಇರಿಸಿದ ಸ್ಪೋಟಕ ಸ್ಪೋಟಿಸಿ ಈ ಅನಾಹುತ ಸಂಭವಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











Click it and Unblock the Notifications