ಕೂಡಲಸಂಗಮ : ಜ.11 ರಿಂದ ಶರಣ ಮೇಳ

ಧರ್ಮ ಚಿಂತನಗೋಷ್ಠಿ ಮೂಲಕ ಜ.11 ರಂದು ಮೇಳಕ್ಕೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಮೇಳವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಎಸ್ ಆರ್ ನಾಯಕ್ ನೆನಪಿನ ಕಾಣಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಶರಣ ಮೇಳ ಉತ್ಸವ ಸಮಿತಿ ಕಾರ್ಯಾಧ್ಯಕ್ಷೆ ಮಾತೆ ಮಹಾದೇವಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ರಾಷ್ಟ್ರೀಯ ಬಸವ ಮೇಳದ ಅಧಿವೇಶನ ಡಿ.13 ರಂದು ನಡೆಯಲಿದೆ. ಜ.14 ರಂದು ಸಮುದಾಯ ಪ್ರಾರ್ಥನೆ ನಡೆಯಲಿದೆ. ದೇಶಾದ್ಯಂತ ಸಾವಿರಾರು ಭಕ್ತ ಪ್ರತಿನಿಧಿಗಳು ಹಾಗೂ ಲಕ್ಷಾಂತರ ಭಕ್ತಾಧಿಗಳು ಭಾಗವಹಿಸಲಿದ್ದಾರೆ. ಈ ಐದು ದಿನಗಳಲ್ಲಿ ಇಡೀ ಕೂಡಲ ಸಂಗಮ ಬಸವ ಸಂಸ್ಕೃತಿ ಧರ್ಮಪೀಠವಾಗಿ ಗಮನ ಸೆಳೆಯಲಿದೆ ಎಂದು ಮಾತೆ ಹೇಳಿದರು.
ಅನುದಾನ ತಪ್ಪು : ಸರಕಾರ ನೀಡುವ ಅನುದಾನವನ್ನು ಮಠಗಳು ಸ್ವೀಕರಿಸುವುದು ತಪ್ಪು. ಮಠಗಳಿಗೆ ಸರಕಾರ ನೀಡಿದ ಹಣ ಜನರಿಗೆ ಸೇರಿದ್ದು, ಜನರ ತೆರಿಗೆಯಿಂದ ಮಠಗಳನ್ನು ನಡೆಸುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಮಾತೆ ಮಹಾದೇವಿ ಅಭಿಪ್ರಾಯಪಟ್ಟರು.












Click it and Unblock the Notifications