ಮೈಸೂರಿನಲ್ಲಿ ತೀವ್ರಗೊಂಡ ’ಆಪರೇಷನ್ ಚಾಮುಂಡಿ’

Mysore Police intensify Operation Chamundi
ಮೈಸೂರು, ಡಿ.29: ಮೈಸೂರಿನಲ್ಲಿ ರಾತ್ರಿವೇಳೆಯಲ್ಲಿ ತೆರಳುವವರನ್ನು ಬೆದರಿಸಿ ಹಣ, ಚಿನ್ನಾಭರಣ ದೋಚುತ್ತಿದ್ದದಲ್ಲದೆ, ಚಾಮುಂಡಿಬೆಟ್ಟದ ನಿರ್ಜನ ಪ್ರದೇಶದಲ್ಲಿ ಪ್ರೇಮ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರೇಮಿಗಳ ಮೇಲೆ ಅಟ್ಯಾಕ್ ಮಾಡಿ ಅವರಿಂದ ಹಣ, ಚಿನ್ನ, ಮೊಬೈಲ್ ಫೋನ್‌ಗಳನ್ನು ಕಸಿದು ಪರಾರಿಯಾಗುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಹೊಟೇಲ್ ಉದ್ಯಮಿಯೊಬ್ಬರ ಕಾರಿನ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕಾರನ್ನು ಅಪಹರಿಸಿರುವ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ನಗರದಾದ್ಯಂತ "ಆಪರೇಷನ್ ಚಾಮುಂಡಿ" ಕಾರ್ಯಾಚರಣೆ ಆರಂಭಿಸಲಾಗಿದೆ.

ನಡುರಾತ್ರಿಯಲ್ಲಿ ನಡೆದ ಶೂಟೌಟ್ ಪ್ರಕರಣ ನಗರದಲ್ಲಿ ಆತಂಕವನ್ನು ಸೃಷ್ಟಿಸಿದೆ. ಆದರೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಎಲ್ಲೆಡೆ ನಾಕಾಬಂಧಿ ರಚಿಸಿದ್ದರು. ಈ ಹಿನ್ನಲೆಯಲ್ಲಿ ಹೊರ ಹೋಗಲಾಗದೆ ದುಷ್ಕರ್ಮಿಗಳು ಅಪಹರಿಸಿದ್ದ ಹ್ಯುಂಡೈ ಅಸೆಂಟ್ ಕಾರನ್ನು(ಕೆಎ 09-ಎನ್4988) ಹೆಬ್ಬಾಳು ಕೈಗಾರಿಕಾ ಬಡಾವಣೆಯಲ್ಲಿ ನಿಲ್ಲಿಸಿದ್ದರೆ, ತಾವು ಕೃತ್ಯಕ್ಕೆ ಬಳಸಿದ್ದ ಕೆಂಪು ಬಣ್ಣದ ಮಾರುತಿ ವ್ಯಾನ್(ಕೆಎ 02-ಎನ್ 0212)ನ್ನು ನಗರದಿಂದ ಹೊರ ಕೊಂಡೊಯ್ಯಲಾಗದೆ ಹೂಟಗಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.

ಘಟನೆಯ ವಿವರ:
ಭಾನುವಾರ ಮಧ್ಯ ರಾತ್ರಿ ನಗರದ ಜಯಲಕ್ಷ್ಮಿಪುರಂ 3ನೇ ಬ್ಲಾಕ್‌ನ 4ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಹೋಟೆಲ್ ಉದ್ಯಮಿ ರೋಹನ್ ಅವರ ಕಾರನ್ನು ಮನೆಗೆ ಸಮೀಪವೇ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಅವರನ್ನು ಬೆದರಿಸಿ ಕಾರಿನಿಂದ ಕೆಳಗಿಳಿಸಿ ಕಾರನ್ನು ಅಪಹರಿಸಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಡಿಸಿಪಿಗಳಾದ ಬಸವರಾಜ ಮಾಲಗತ್ತಿ, ರಾಜೇಂದ್ರಪ್ರಸಾದ್, ಎಸಿಪಿ ಪೂಜಾರ್, ಇನ್ಸ್‌ಪೆಕ್ಟರ್ ನೇಮಿರಾಜ್ ಇನ್ನಿತರ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಸಿಕ್ಕಿದ ಪಿಸ್ತೂಲ್ ಮ್ಯಾಗಜಿನ್ ಸಮೇತ ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಅಪಹರಿಸಿದ್ದ ಕಾರು ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ವ್ಯಾನ್ ಪತ್ತೆಯಾಗಿದ್ದು, ಈ ಘಟನೆಯ ಹಿಂದಿನ ರಹಸ್ಯ ಪೊಲೀಸರ ತನಿಖೆಯಿಂದಷ್ಟೆ ಹೊರಬರಬೇಕಿದೆ.

ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ "ಆಪರೇಷನ್ ಚಾಮುಂಡಿ" ಎಂಬ ಕಾರ್ಯಾಚರಣೆ ಕೈಗೊಂಡಿದೆ. ಚಾಮುಂಡಿಬೆಟ್ಟದ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಸಂಜೆ ಏಳರಿಂದ ಮಧ್ಯೆ ರಾತ್ರಿಯವರೆಗೂ ದ್ವಿಚಕ್ರವಾಹನಗಳಿಂದ ಹಿಡಿದು ಭಾರೀ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದಾಖಲಾತಿ, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. [ಚಾಮುಂಡಿ ಬೆಟ್ಟ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+