ಶಿಕಾರಿಪುರ : ದೋಣಿ ಮುಳುಗಿ ನಾಲ್ಕು ಸಾವು
ಶಿವಮೂಗ್ಗ, ಡಿ. 24 : ಕೆರೆಯಲ್ಲಿ ದೋಣಿ ಮುಳುಗಿ ನಾಲ್ವರು ಸಾವನ್ನಪ್ಪಿದ್ದು, ಮೂವರನ್ನು ರಕ್ಷಣೆ ಮಾಡಿರುವ ಘಟನೆ ಶಿಕಾರಿಪುರ ತಾಲ್ಲೂಕು ಅಂಬರಕೊಪ್ಪ ಬಳಿ ಇರುವ ಕೊಪ್ಪದಕೆರೆಯಲ್ಲಿ ಸಂಭವಿಸಿದೆ.
ಎರಡು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಉಳಿದೆರಡು ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೂವರನ್ನು ಅಂಬರಕೊಪ್ಪ ಗ್ರಾಮಸ್ಥರು ರಕ್ಷಿಸಿದ್ದಾರೆ. ಮೃತಪಟ್ಟವರ ವಿವರ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶವ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಲಕ್ಷ ರುಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
ಇತ್ತೀಚೆಗೆ ಮೈಸೂರು ಹೊರವಲಯದಲ್ಲಿರುವ ದಳವಾಯಿ ಕೆರೆಯಲ್ಲಿ ಟೆಂಪೋವೊಂದು ಮುಳುಗಿ 28 ಮಂದಿ ಜಲಸಮಾಧಿಯಾಗಿರುವ ಘಟನೆ ಮಾಸುವ ಮುನ್ನವೇ ಶಿಕಾರಿಪುರದಲ್ಲಿ ಇಂದು ಮತ್ತೊಂದು ಘಟನೆ ನಡೆದಿದೆ.












Click it and Unblock the Notifications