ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2010 ಸೈನಾಗೆ ಸ್ಮರಣೀಯ ವರ್ಷ

By Mrutyunjaya Kalmat
|
Google Oneindia Kannada News

Saina Nehwal
ನವದೆಹಲಿ, ಡಿ. 20 : ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ಅವರಿಗೆ 2010 ವರ್ಷ ಸ್ಮರಣೀಯ ವರ್ಷ. ಈ ವರ್ಷದಲ್ಲಿ ಅವರು ಐದು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ವಿಶ್ವದ ನಂ.2 ಆಟಗಾರ್ತಿಯಾಗಿ ಅಪೂರ್ವ ಯಶಸ್ಸು ಸಾಧಿಸಿರುವುದು ಹೆಮ್ಮೆಯ ಸಂಗತಿ. ಇಂಡಿಯನ್ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್, ಸಿಂಗಾಪುರ ಸೂಪರ್ ಸಿರೀಸ್ ಮತ್ತು ಕಳೆದ ಜೂನ್‌ ನಲ್ಲಿ ಇಂಡೋನೇಷ್ಯಾ ಓಪನ್‌ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿದ್ದಾರೆ.

ಕಳೆದ ವರ್ಷ ಇಂಡೋನೇಷ್ಯಾ ಟೈಟಲ್ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ ಲೋಕದ ದೈತ್ಯರನ್ನು ಕೆಡಹುವ ಅಭಿಯಾನವನ್ನು ಮುಂದುವರಿಸಿರುವ ಸೈನಾ ತನ್ನ ಕಠಿಣ ಪರಿಶ್ರಮದ ಮೂಲಕ ಭಾರತದ ಬ್ಯಾಡ್ಮಿಂಟನ್ ಲೋಕದಲ್ಲಿ ಅತ್ಯುನ್ನತ ತಾರೆಯಾಗಿ ಬೆಳಗುತ್ತಿದ್ದಾರೆ. ಹೈದರಾಬಾದ್‌ನ ಬೆಡಗಿ ಸೈನಾ ಕಡಿಮೆ ಅವಧಿಯಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡ ಭಾರತದ ಪ್ರಥಮ ಮಹಿಳಾ ಶಟ್ಲರ್ ಆಗಿದ್ದಾರೆ.

ನವದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ಗೇಮ್ಸ್‌ ನ ಸಿಂಗಲ್ಸ್‌ನಲ್ಲಿ ಚಿನ್ನ ದೊರಕಿಸಿಕೊಟ್ಟ ಸೈನಾ, ಏಷ್ಯನ್ ಗೇಮ್ಸ್‌ ನಲ್ಲಿ ಮಾತ್ರ ಕ್ವಾರ್ಟರ್ ಫೈನಲ್ ಹಂತದಲ್ಲಿ ಹೊರಬಿದ್ದು ನಿರಾಶೆ ಉಂಟು ಮಾಡಿದ್ದರು. ಆದರೆ ಮತ್ತೆ ಆಶಾಕಿರಣ ಮೂಡಿಸಿದ ಸೈನಾ ಕಳೆದ ತಿಂಗಳು ಹಾಂಕಾಂಗ್ ಓಪನ್‌ ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

2010ರಲ್ಲಿ ಭಾರತದ ಬ್ಯಾಡ್ಮಿಂಟನ್‌ ನಲ್ಲಿ ಸೈನಾರ ಅದ್ಬುತ ಸಾಧನೆಯನ್ನು ಗುರುತಿಸಿ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರ ಅವರನ್ನು ಇನ್ನಷ್ಟು ಪ್ರಶಸ್ತಿ ಗೆಲ್ಲಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದಂತಾಗಿದೆ.ಕೈಗನ್ನಡಿಯಾಗಿದೆ.(ಸೈನಾ ನೆಹ್ವಾಲ್)

English summary
Saina Nehwal continued her giant strides, breaking through the "Great Wall of China" with five international titles to become the world number two as Indian badminton rode on her success to rise in profile in a highly successful 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X