ಹರಿಯಾಣ ಸಿಎಂ ಮೇಲೆ ಮತ್ತೆ ಬೂಟಿನ ದಾಳಿ

ಇಲ್ಲಿನ ಸರಕಾರಿ ಕಾಲೇಜು ಆವರಣದಲ್ಲಿ ಹಿಂದುಳಿದ ವರ್ಗಗಳ ಸಮ್ಮೇಳನವನ್ನುದ್ದೇಶಿಸಿ ಹೂಡಾ ಮಾತನಾಡುತ್ತಿದ್ದರು. ಈ ವೇಳೆ ಯುವಕ ಮುಖ್ಯಮಂತ್ರಿ ಮಾತನಾಡುತ್ತಿದ್ದ ವೇದಿಕೆಯತ್ತ ಶೂ ಎಸೆದ ಕೂಡಲೇ ಪೊಲೀಸರು ಆತನನ್ನು ಸುತ್ತುವರಿದು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದದ್ದಾರೆ. ಯುವಕ ಎಸೆದ ಶೂ ಹೂಡಾ ತಗುಲಿಲ್ಲ. ವೇದಿಕೆಯ ಮುಂಭಾಗದಲ್ಲಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಜಿತ್ ಸಿಂಗ್ ಶೂ ಎಸೆದ ಭೂಪ ಎಂದು ಪೊಲೀಸರು ತಿಳಿಸಿದ್ದಾರೆ.
ಬೂಟು ಎಸೆತ ಕುರಿತು ಒಂದು ವಿಡಂಬನಾತ್ಮಕ ಲೇಖನ
ತಾನು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಮಖ್ಯಮಂತ್ರಿ ಬಳಿ ಹೇಳಿಕೊಳ್ಳಲು ಸಂಬಂಧಿತ ಅಧಿಕಾರಿಗಳು ತನಗೆ ಅವಕಾಶ ಮಾಡಿಕೊಡಲಿಲ್ಲವಾದ್ದರಿಂದ ತಾನು ಈ ಕೃತ್ಯವೆಸಗಿರುವುದಾಗಿ ಎಸ್ಸಾರ್ ಜಿಲ್ಲೆಯ ಕಿರ್ಮಾರ ಗ್ರಾಮದ ಯುವಕ ಅಜಿತ್ ಸಿಂಗ್ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. 2010ರ ಅಗಸ್ಟ್ 22 ರಂದು ದಕ್ಷಿಣ ಹರಿಯಾಣದ ಮಹೇಂದ್ರ ಗಢ್ ಎಂಬಲ್ಲಿ ಹೂಡಾ ಅವರ ಮೇಲೆ ಮೊದಲ ಬೂಟಿನ ದಾಳಿ ನಡೆದಿತ್ತು. ಇದು ಇವರಿಗೆ ಎರಡನೇ ಬಾರಿಯಾಗಿದ್ದು, ಈ ಪಟ್ಟಿಯಲ್ಲಿ ಇವರೇ ಮೊದಲಿಗರು.
ಅಪಘಾನಿಸ್ತಾನದ ಪ್ರವಾಸ ಕೈಗೊಂಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಮೊದಲ ಬೂಟಿನ ದಾಳಿ ನಡೆಯಿತು. ಗೃಹ ಸಚಿವ ಪಿ ಚಿದಂಬರಂ, ಜಮ್ಮು ಕಾಶ್ಮೀರ ಅಧ್ಯಕ್ಷ ಒಮರ್ ಅಬ್ಧುಲ್ಲಾ, ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಪಂಜಾಬ್ ನ ಕುರುಕ್ಷೇತ್ರದ ಸಂಸದ ಸಚಿನ ಜಿಂದಾಲ್ ಅವರ ಬೂಟು ಹಾಗೂ ಚಪ್ಪಲಿಗಳ ದಾಳಿಗಳು ನಡೆದಿವೆ.












Click it and Unblock the Notifications