ಔಟ್ ಲುಕ್ ನಿಂದ ಮತ್ತಷ್ಟು ನೀರಾ ರಾಡಿ ಬಿಡುಗಡೆ

ಪತ್ರಿಕೆಯ ನೂತನ ಸಂಚಿಕೆಯಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ. ಭಾರತೀಯ ಕೈಗಾರಿಕಾ ಒಕ್ಕೂಟದ ಈ ಹಿಂದಿನ ಅಧ್ಯಕ್ಷರಾಗಿದ್ದ ತರುಣ್ ದಾಸ್ ಹಾಗೂ ತಮಿಳುನಾಡಿನ ಮಹಿಳಾ ರಾಜಕಾರಣಿಯೊಬ್ಬರ ನಡುವಣ ಸಂಭಾಷಣೆಗಳನ್ನು ಈ ನೂತನ ಟೇಪ್ ಒಳಗೊಂಡಿದೆ. ಈ ಹಿಂದೆ ನೀರಾ ಜತೆಗಿನ ಸಂಭಾಷಣೆಯ 120 ಟೇಪ್‌ಗಳು ಬಹಿರಂಗವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎದ್ದು ರಾಜಾ ಅವರು ರಾಜೀನಾಮೆ ನೀಡಬೇಕಾಯಿತು.
2009ರ ಮೇನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಲಾಯಿತು. ಈ ದಿಸೆಯಲ್ಲಿ ಟಾಟಾ, ಅಂಬಾನಿಯಂತಹ ದೊಡ್ಡ ಉದ್ಯಮಿಗಳು ಯಾವ ರೀತಿಯಲ್ಲಿ ಪ್ರಭಾವ ಬೀರಿದರು ಎಂಬುದರ ಬಗ್ಗೆಯೂ ಇದು ಬೆಳಕು ಚೆಲ್ಲಿದೆ. ಅದರಲ್ಲೂ ವಿಶೇಷವಾಗಿ ಎ. ರಾಜಾ ಅವರನ್ನು ದೂರಸಂಪರ್ಕ ಸಚಿವರನ್ನಾಗಿ ನೇಮಕ ಮಾಡಲು ನಡೆದ ಲಾಬಿಯ ಬಗ್ಗೆ ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಲಿದೆ.
ರಾಜಾ ದಲಿತ ವರ್ಗದಿಂದ ಬಂದವರು ಎಂಬ ಕಾರಣಕ್ಕಾಗಿ ಕರುಣಾನಿಧಿ ಅವರ ಸೇರ್ಪಡೆಗೆ ಒತ್ತಡ ಹೇರಿದ್ದರು. ಇದಕ್ಕೆ ಪ್ರಧಾನಿ ವಿರೋಧ ಇರಲಿಲ್ಲ. ಹಿಂದಿನ ಅಧಿಕಾರದ ಅವಧಿಯಲ್ಲಿ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡ ಟಿಆರ್ ಬಾಲು ಮಾತ್ರ ಸಂಪುಟ ಸೇರುವುದು ಬೇಡ ಎಂಬುದು ಪ್ರಧಾನಿ ಒತ್ತಾಸೆಯಾಗಿತ್ತು ಎಂದು ರಾಡಿಯಾ ಸಂಭಾಷಣೆ ವೇಳೆ ಬಹಿರಂಗಪಡಿದ್ದಾರೆ.












Click it and Unblock the Notifications