ಲಷ್ಕರ್ ಇ ತೋಯ್ಬಾ ಬಜೆಟ್ 52 ಲಕ್ಷ ಡಾಲರ್

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು 2009ರಲ್ಲಿಯೇ ಈ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಅಗಸ್ಟ್ 2009ರಲ್ಲೇ ಹಂಚಿಕೊಂಡಿದ್ದಾರೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಹಫೀಜ್ ಸಯೀದ್ ಎಂಬಾತ ಲಷ್ಕರ್-ಇ-ತೊಯ್ಬಾ ಮತ್ತು ಜಮಾತ್-ಉದ್- ದುವಾ ಎರಡೂ ಸಂಘಟನೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾನೆ.
ದತ್ತಿನಿಧಿ ಹೆಸರಿನಲ್ಲಿಯೂ ಹಣ ಸಂಗ್ರಹ ಮಾಡಲಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ಉಗ್ರ ಚಟುವಟಿಕೆಗಳಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಖಾಸಗಿ ಕೊಡುಗೆ, ಸರ್ಕಾರೇತರ ಸಂಸ್ಥೆಗಳು, ಮದರಸಾಗಳು ಮತ್ತು ವಾಣಿಜ್ಯೋದ್ಯಮಿಗಳಿಂದ ದಕ್ಷಿಣ ಏಷ್ಯಾ, ಮಧ್ಯ ಪ್ರಾಚ್ಯ ಮತ್ತು ಯುರೋಪ್‌ಗಳಿಂದ ಹಣ ಸಂಗ್ರಹ ಮಾಡಲಾಗಿದೆ.
ಹಫೀಜ್ ಸಯೀದ್ ಲಷ್ಕರ್ ಸಂಘಟನೆಯ ಮುಖ್ಯಸ್ಥನಾದರೆ, ಜಕೀವುರ್ ರೆಹಮಾನ್ ಲಖ್ವಿ ಲಷ್ಕರ್ ಸಂಘಟನೆಯ ಕಾರ್ಯಚಟುವಟಿಕೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರನ್ನೂ ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪಾಕ್‌ನಲ್ಲಿ ಬಂಧಿಸಿದ್ದರೂ ಸಹ, ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರೆಸಿದ್ದಾರೆ ಎಂದು ದಾಖಲೆಗಳು ತಿಳಿಸಿವೆ. ಈ ಇಬ್ಬರೇ ಮುಂಬೈ ದಾಳಿಯ ರೂಪುರೇಷೆ ತಯಾರಿಸಿದವರು ಎನ್ನಲಾಗಿದೆ.











Click it and Unblock the Notifications