ಬೇಸಿಗೆಯಲ್ಲಿ ನೋ ಲೋಡ್ ಶೆಡ್ಡಿಂಗ್ :ಶೋಭಾ
ಬೆಂಗಳೂರು,
ನ.30: ಮುಂದಿನ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಇರುವುದಿಲ್ಲ, ರಾಜ್ಯದಲ್ಲಿ ವಿದ್ಯುತ್ ಕೊರತೆ ಇರದಂತೆ ಎಚ್ಚರಿಕೆ ವಹಿಸಲಾಗಿದೆ. ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. id="toptextpromo">ಜಲವಿದ್ಯುತ್
ಮೂಲಕ 40 ಮಿಲಿಯನ್ ಯೂನಿಟ್ ವಿದ್ಯುತ್ ಲಭ್ಯವಿದೆ. ಛತ್ತೀಸ್ ಗಡದಿಂದ ಪ್ರತಿ ಯೂನಿಟ್ ಗೆ 4.7ರೂ ನಂತೆ ವಿದ್ಯುತ್ ಖರೀದಿಸಿ ಅಗತ್ಯ ಬಿದ್ದಾಗ ಪೂರೈಸಲಾಗುವುದು ಎಂದರು. ಬೇಸಿಗೆಯಲ್ಲಿ 40 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾಸಿದಲಾಗುವುದು. ಒಟ್ಟು ಜಲ ವಿದ್ಯುತ್ ಮೂಲಕ 15 ಮಿಲಿಯನ್ ಯೂನಿಟ್ ವಿದ್ಯುತ್ ಶೇಖರಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ 3 ಫೇಸ್ ನಲ್ಲಿ 6 ಗಂಟೆ ವಿದ್ಯುತ್ ಅನ್ನು ಕಡ್ಡಾಯವಾಗಿ ಪೂರೈಸಲಾಗುವುದು ಎಂದರು. id='are-slot-1' class='oiad oi-axt oiadv'> id='top-searched-articles'>ಜಲ
ವಿದ್ಯುತ್ ಅಲ್ಲದೆ ಬಳ್ಳಾರಿ, ರಾಯಚೂರು, ಉಡುಪಿ ವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಘಟಕಗಳಲ್ಲಿರುವ ತೊಂದರೆಗಳು ಹಾಗೂ ವಿದ್ಯುತ್ ಪೂರೈಕೆಗೆ ಮಾರ್ಗ ಎಳೆಯಲು ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕಾಗುತ್ತದೆ. ಈ ಬಗ್ಗೆ ಡಿ.10 ರಂದು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯುಯುವುದಾಗಿ ಸಚಿವೆ ಶೋಭಾ ಹೇಳಿದರು. ಈ ಘಟಕಗಳಿಂದ ಹೆಚ್ಚುವರಿ 10 ಮಿಲಿಯನ್ ಯೂನಿಟ್ ಲಭಿಸಲಿದೆ. ಕರ್ನಾಟಕ ವಿದ್ಯುತ್ ಕಂಪನಿಯನ್ನು ಉತ್ತರ ಕರ್ನಾಟಕದ ಭಾಗಕ್ಕೆ ಸ್ಥಳಾಂತರಿಸಲು ಕೂಡಾ ಉದ್ದೇಶಿಸಲಾಗಿದೆ ಎಂದು ಶೋಭಾ ತಿಳಿಸಿದರು.











Click it and Unblock the Notifications