ಅರುಂಧತಿ ರಾಯ್, ಗಿಲಾನಿ ವಿರುದ್ಧ ಎಫ್ಐಆರ್?

ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಿವಿಧ ನಿಯಮಗಳಡಿ ಎಫ್ಐಆರ್ ದಾಖಲಿಸಿ ಮುಂದಿನ ವಿಚಾರಣೆ ದಿನಾಂಕ ಜನವರಿ 6, 2011ರಂದು ವರದಿ ನೀಡುವಂತೆ ಪೊಲೀಸರಿಗೆ ದಂಡಾಧಿಕಾರಿ ನವಿತಾ ಕುಮಾರಿ ತಾಕೀತುಪಡಿಸಿದ್ದಾರೆ.
ಗಿಲಾನಿ ವಿರುದ್ಧ ದೇಶದ್ರೋಹ ಎಸಗಿರುವ ಯಾವುದೇ ಆರೋಪ ಇಲ್ಲವೆಂದು ಪೊಲೀಸರು ನೀಡಿದ ವರದಿಯನ್ನು ತಿರಸ್ಕರಿಸಿದ ದಂಡಾಧಿಕಾರಿಗಳು ಗಿಲಾನಿ ದೇಶದ್ರೋಹ ಎಸಗಿರುವುದಕ್ಕೆ ಸಾಕ್ಷ್ಯಗಳಿವೆ. ಮತ್ತೆ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಪೊಲೀಸರನ್ನು ನ್ಯಾಯಾಧೀಶರು ಆಗ್ರಹಿಸಿದರು.
ಕಳೆದ ಅಕ್ಟೋಬರ್ ನಲ್ಲಿ ಶ್ರೀನಗರದಲ್ಲಿ ಅರುಂಧತಿ ಮಾಡಿದ ಭಾಷಣದಲ್ಲಿ, "ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿರಲೇ ಇಲ್ಲ. ಇದು ಐತಿಹಾಸಿಕ ಸತ್ಯ. ಭಾರತದ ಸರಕಾರವೂ ಈ ಸತ್ಯವನ್ನು ಒಪ್ಪಿಕೊಂಡಿದೆ" ಎಂದು ಪ್ರಚೋದನಕಾರಿ ಹೇಳಿಕೆ ನೀಡಿ ಸರಕಾರ ಮತ್ತು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.












Click it and Unblock the Notifications