ಪುಟ್ಟಪರ್ತಿಯಲ್ಲಿ ಯಡ್ಡಿ : ಮುಂದೇನಾಗುವುದೋ ಕಾದು ನೋಡಿ

ಅಲ್ಲಿ ನವದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರು ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡಲು ಬೆಳಿಗ್ಗೆ 11ಗಂಟೆಯ ಡೆಡ್ ಲೈನ್ ಕೊಟ್ಟಿದ್ದರೆ, ಯಡಿಯೂರಪ್ಪನವರು ಕಳೆದ ದಿನದಿಂದ ನಾಲ್ಕು ಬಾರಿ ನವದೆಹಲಿ ಪ್ರಯಾಣ ರದ್ದುಪಡಿಸಿದ್ದು, ಸದ್ಯಕ್ಕೆ ಪುಟ್ಟಪರ್ತಿಯಲ್ಲಿ ಸಾಯಿಬಾಬಾ ಅವರ 85ನೇ ಹುಟ್ಟುಹಬ್ಬದ ಸಂಭ್ರದಲ್ಲಿ ಭಾಗವಹಿಸಲು ಆಂಧ್ರಕ್ಕೆ ತೆರಳಿದ್ದಾರೆ.
ಈ ನಡುವೆ, ಯಡಿಯೂರಪ್ಪನವರು ರಾಜೀನಾಮೆ ನೀಡಲು ಕೆಲ ಷರತ್ತುಗಳನ್ನು ಒಡ್ಡಿ ಬಿಜೆಪಿ ವರಿಷ್ಠರನ್ನು ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ.
1) ಅಶೋಕ್ ಶರ್ಮಾ ಎಂಬವರೊಡನೆ ಯಡಿಯೂರಪ್ಪನವರನ್ನು ಬೀಳಿಸಲು ಷಡ್ಯಂತ್ರ ನಡೆಸಿ ವಿಡಿಯೋ ಮುಖಾಂತರ ಸಿಕ್ಕಿಬಿದ್ದಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸಂಪುಟದಲ್ಲಿ ಇರಲೇಬಾರದು.
2) ಭ್ರಷ್ಟಾಚಾರದಲ್ಲಿ ಗುರಿಯಾಗಿರುವ ಯಾವುದೇ ಸಚಿವರು ಸರಕಾರದಲ್ಲಿ ಇರಬಾರದು.
3) ತಾವು ಸೂಚಿಸುವ ವ್ಯಕ್ತಿಯನ್ನೇ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಬೇಕು.
ಮುಂದೆ ಏನಾಗುತ್ತದೋ ಎಂಬುದನ್ನು ಕಾದು ನೋಡಿ.












Click it and Unblock the Notifications