ಧರ್ಮಸ್ಥಳ: ಡಿ.1ರಿಂದ ಲಕ್ಷದೀಪೋತ್ಸವ ಸಂಭ್ರಮ

ಉಜಿರೆ, ನ.18: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮ ಡಿ. 1 ರಿಂದ 6 ರ ವರೆಗೆ ನಡೆಯಲಿದೆ. ಡಿ. 4 ರಂದು ನಡೆಯಲಿರುವ 78ನೇ ಸರ್ವಧರ್ಮ ಸಮ್ಮೇಳನವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಉದ್ಘಾಟಿಸಲಿದ್ದಾರೆ. ಹರಿಯಾಣದ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶ್ರೀಮಂಜುನಾಥೇಶ್ವರ ಟ್ರಸ್ಟ್ ಪ್ರಕಟಿಸಿದೆ.

ಬಳ್ಳಾರಿಯ ಬಿಷಪ್ ಹೆನ್ರಿ ಡಿಸೋಜಾ, ಮೈಸೂರಿನ ಶೇಖ್ ಜಬೀಹುಲ್ಲಾ ಮತ್ತು ನಿವೃತ್ತ ಪ್ರಾಂಶುಪಾಲ ಪಿ. ಅನಂತರಾಜ ಇಂದ್ರ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9 ಗಂಟೆಯಿಂದ ಚೆನ್ನೈನ ಶೀಲಾ ಉನ್ನಿಕೃಷ್ಣನ್ ಮತ್ತು ಬಳಗದವರಿಂದ ನೃತ್ಯ ನಾಟಕ ಪ್ರದರ್ಶನವಿದೆ.

ಡಿ.5 ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ನಾಡೋಜ ಡಾ. ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ಡಾ. ಎನ್.ಎಸ್. ತಾರಾನಾಥ್, ಬೆಂಗಳೂರಿನ ಎಂ.ಎಸ್. ನರಸಿಂಹಮೂರ್ತಿ ಮತ್ತು ನೇಮಿಚಂದ್ರ ಉಪನ್ಯಾಸ ನೀಡಲಿದ್ದಾರೆ.

ಬಳಿಕ ಮುಂಬೈನ ಜಯಶ್ರೀ ಹಾಗೂ ಪಂಡಿತ್ ರೋಣು ಮಜುಮ್ದಾರ್ ಅವರಿಂದ ಸಂಗೀತ ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದೆ.ರಾತ್ರಿ 12 ಗಂಟೆಯಿಂದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದೆ. ಡಿ. 6ರಂದು ಸಂಜೆ ಹೇಮಾವತಿ ವಿ, ಹೆಗ್ಗಡೆ ಮಾರ್ಗದರ್ಶನ ದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ರಾಜ್ಯ ಮಟ್ಟದ ವಸ್ತು ಪ್ರದರ್ಶನ ಹಾಗೂ ಪ್ರತಿದಿನ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+