ಕರ್ನಾಟಕ ಸಿಎಂ ಮಾನ ಸಂಸತ್ತಿನಲ್ಲಿ ಹರಾಜು

ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ, ಎಡಪಕ್ಷಗಳು, ಎಐಎಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ತಮ್ಮ ಆಗ್ರಹಿಸತೊಡಗಿದವು. ಆದರೆ, ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸಂಸದರು ಬಿಜೆಪಿ ವಿರೋಧಿ ಹೇಳಿಕೆಗಳುಳ್ಳ ಫಲಕಗಳನ್ನು ಹಿಡಿದು ಪ್ರತಿಭಟಿಸತೊಡಗಿದರು.
'ಭೂ ಹಗರಣದಲ್ಲಿ ಸಿಲುಕಿರುವ ಕರ್ನಾಟಕ ಸರಕಾರವನ್ನು ವಜಾಗೊಳಿಸಿ', "ಭ್ರಷ್ಟರಿಂದ ಕರ್ನಾಟಕವನ್ನು ರಕ್ಷಿಸಿ" 'ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿ', ಮುಖ್ಯಮಂತ್ರಿಯವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂಬ ಹೇಳಿಕೆಗಳುಳ್ಳ ಫಲಕ ಪತ್ರಗಳನ್ನು ಹಿಡಿದ ಕಾಂಗ್ರೆಸ್ ಸಂಸದರು ಕರ್ನಾಟಕ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಸ್ಪೀಕರ್ ಮೀರಾಕುಮಾರ್ ಅವರ ಮಾತು ಸಂಸದರ ಕಿವಿಗೆ ತಲುಪಲೇ ಇಲ್ಲ. ನಂತರ ಕಲಾಪವನ್ನು ಅನಿವಾರ್ಯವಾಗಿ ಮೀರಾಕುಮಾರ್ ಅವರು ಮುಂದೂಡಿದರು.












Click it and Unblock the Notifications