ಕ್ರಿಕೆಟ್ ಉಳಿಸಲು ಸ್ಪರ್ಧಿಸಿದ್ದೇವೆ : ಶ್ರೀನಾಥ್
ಶಿವಮೊಗ್ಗ,
ನ. 18 : ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಲ್ಲಿ ಕಳೆದ ಐದಾರು ವರ್ಷಗಳಿಂದ ಗುಂಪುಗಾರಿಕೆ ಮನೆ ಮಾಡಿದೆ. ಇಡೀ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದನ್ನು ಸರಿ ದಾರಿಗೆ ತರುವ ಉದ್ದೇಶದಿಂದ ಹಾಗೂ ನಿಜವಾದ ಕ್ರಿಕೆಟ್ ಉಳಿಸಿಕೊಳ್ಳುವ ಆಶಯದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ ಎನ್ನುವುದು ಖ್ಯಾತ ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್‌ರ ಸ್ಪಷ್ಟ ನುಡಿಗಳು. id="toptextpromo">ಶಿವಮೊಗ್ಗ
ನಗರಕ್ಕೆ ಇಂದು ಆಗಮಿಸಿ ಖಾಸಗಿ ಹೋಟೆಲ್ ವೊಂದರಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ಕೆಎಸ್ ಸಿಎಯಲ್ಲಿ ಗುಂಪುಗಾರಿಕೆ ಇದ್ದು, ವಿವಿಧ ಬಣಗಳಿವೆ. ಇದು ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ಕ್ರಿಕೆಟ್ ಹಿಂದುಳಿದಿದೆ. ಆಟಗಾರರಿಗೆ ಸಮರ್ಪಕವಾದ ಪ್ರೋತ್ಸಾಹ ಸಿಗುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ತಾವು
ಯಾವುದೇ ಬಣದೊಂದಿಗೂ ಗುರುತಿಸಿಕೊಂಡಿಲ್ಲ. ಬ್ರಿಜೇಶ್ ಪಟೇಲ್ ತಮಗೆ ಬೆಂಬಲಿಸುತ್ತಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯ ಕತೆ ಇಲ್ಲ. ನಮ್ಮದು ಕೂಡಾ ಕ್ರಿಕೆಟ್ ಬಣವಾಗಿದೆ ಎಂದವರು ಸ್ಪಷ್ಟಪಡಿಸಿದರು.











Click it and Unblock the Notifications