ಮಂಗಳೂರು ಮಾಣಿ ಗೂಗಲ್ ಸ್ಪರ್ಧೆ ವಿಜೇತ
ಬೆಂಗಳೂರು,
ನ. 14: 'ಡೂಡಲ್ ಫಾರ್ ಗೂಗಲ್" ಸ್ಪರ್ಧೆಯಲ್ಲಿ ಮಂಗಳೂರು ಸೇಂಟ್ ಅಲೋಶಿಯಸ್ ಹೈಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿ ಅಕ್ಷಯ್‌ರಾಜ್ ವಿಜೇತನಾಗಿದ್ದಾನೆ. ಸ್ಪರ್ಧೆಯಲ್ಲಿ ಇಡೀ ದೇಶದ ಒಂದರಿಂದ 10ನೇ ತರಗತಿವರೆಗಿನ ಒಟ್ಟು 1.08,000 ಮಂದಿ ಭಾಗವಹಿಸಿದ್ದರು. ಮಕ್ಕಳ ದಿನಾಚರಣೆ(ನ.14) ದಿನದಂದು ವಿಶ್ವದ ಅಗ್ರಗಣ್ಯ ಸರ್ಚ್ ಇಂಜಿನ್ ತಾಣದ D4G ಸ್ಪರ್ಧೆಯ "ಮೈ ಡ್ರೀಮ್ ಇಂಡಿಯಾ" ಎಂಬ ಪರಿಕಲ್ಪನೆಯ ಆಧಾರದ ಮೇಲೆ ಡೂಡ್ಲ್ ರಚಿಸಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. id="toptextpromo">'ಟೆಕ್ನಿಕಲಿ
ಆಂಡ್ ನ್ಯಾಚುರಲಿ ಗ್ರೋಯಿಂಗ್ ಇಂಡಿಯಾ" ಶೀರ್ಷಿಕೆಯಡಿ ಅಕ್ಷಯ್ ಭಾಗವಹಿಸಿದ್ದು, ಕಲಾತ್ಮಕತೆ, ಸೃಜನಶೀಲತೆ ಹಾಗೂ ವಿಷಯ ನಿರೂಪಣಾ ಸಾಮರ್ಥ್ಯದಿಂದ ಆಯ್ಕೆಗೊಂಡಿದ್ದಾನೆ. ಅಕ್ಷಯ್ ಪ್ರತಿನಿಧಿಸಿದ ಶಾಲೆಗೆ ಎರಡು ಲಕ್ಷ ರೂ. ತಂತ್ರಜ್ಞಾನ ಅನುದಾನ ಹಾಗೂ ತಾಂತ್ರಿಕ ಆರಂಭಿಕ ಪ್ಯಾಕೇಜ್ ಬಹುಮಾನವಾಗಿ ಲಭಿಸಲಿದೆ. id='are-slot-1' class='oiad oi-axt oiadv'> id='top-searched-articles'>ಕಳೆದ
12ಕ್ಕೂ ಅಧಿಕ ವರ್ಷಗಳಿಂದ ಶಿಕ್ಷಣ ಹಾಗೂ ಮನರಂಜನೆಯ ಆಗರವಾಗಿರುವ ಗೂಗಲ್, ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸಲಾಗುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ.











Click it and Unblock the Notifications