ಕಾಂಗ್ರೆಸ್ ದುಸ್ಥಿತಿಯಲ್ಲಿದೆ ಎನ್ನುವುದು ಸುಳ್ಳು
ತುಮಕೂರು,
ನ.11 : ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ದುಸ್ಥಿತಿಯಲ್ಲಿದೆ ಎನ್ನುವುದೆಲ್ಲಾ ಸುಳ್ಳು. ಉಪಚುನಾವಣೆಗಳಲ್ಲಿ ಸೋಲು ಅನುಭವಿಸಿದ ಕೂಡಲೇ 125 ವರ್ಷಗಳ ಭವ್ಯ ಇತಿಹಾಸವಿರುವ ಒಂದು ಪಕ್ಷದ ಬಗ್ಗೆ ಈ ನಿರ್ಧಾರಕ್ಕೆ ಬರುವುದು ತಪ್ಪು. ಮುಂದಿನ ಜಿಲ್ಲಾ, ತಾಲೂಕು ಪಂಚಾಯತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ತಾಕತ್ತು ಏನು ಎಂಬುದು ತಿಳಿಯಲಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. id="toptextpromo">ನಗರದ
ಕೇಂದ್ರ ಗ್ರಂಥಾಲಯ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ನೂತನ ಅಧ್ಯಕ್ಷ ಪರಮೇಶ್ವರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಬಳ್ಳಾರಿ ಪಾದಯಾತ್ರೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಕೇವಲವಾಗಿ ಮಾತನಾಡುತ್ತಿವೆ. ಈ ಪಾದಯಾತ್ರೆಯಿಂದ ಪಕ್ಷದಲ್ಲಿ ಒಗ್ಗಟ್ಟು ಮೂಡುವುದರ ಜೊತೆಗೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಮುಂದಿನ ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷಕ್ಕೆ ಅದರ ಫಲ ದೊರೆಯಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಬಡವರಿಗೆ
ಹೊಟ್ಟೆ ತುಂಬ ಅನ್ನ ನೀಡಲು ತಾಕತ್ತಿಲ್ಲದ ರಾಜ್ಯದ ಮುಖ್ಯಮಂತ್ರಿಗಳು ಐವತ್ತು ಲಕ್ಷ ರುಪಾಯಿ ಸೀರೆ ಹಂಚಲು ಒಂದು ಕೋಟಿ ರುಪಾಯಿ ಖರ್ಚು ಮಾಡುತ್ತಿದ್ದಾರೆ. ವಿಧವಾ ವೇತನ, ವೃದ್ದಾಪ್ಯ ವೇತನ, ಭಾಗ್ಯಲಕ್ಷ್ಮಿ ಯೋಜನೆ ಹಾಗೂ ಸಂಧ್ಯಾಸುರಕ್ಷಾದಂತಹ ಯೋಜನೆಗಳಿಗೆ ಯಡಿಯೂರಪ್ಪ ಖರ್ಚು ಮಾಡುತ್ತಿರುವುದು ಕೇಂದ್ರ ಸರಕಾರದ ಹಣ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.











Click it and Unblock the Notifications