ಮಧ್ಯಂತರ ಚುನಾವಣೆ ಗ್ಯಾರಂಟಿ : ಪರಮೇಶ್ವರ
ಬೆಂಗಳೂರು,
ನ. 10 : ಬಿಜೆಪಿ ಸರಕಾರದ ದುರಾಡಳಿತ ಗಮನಿಸಿದರೆ ಯಾವುದೇ ಕ್ಷಣದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಭವಿಷ್ಯ ನುಡಿದಿದ್ದಾರೆ. id="toptextpromo">ಪ್ರೆಸ್‌ಕ್ಲಬ್
ಆವರಣದಲ್ಲಿ ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರ ಖರೀದಿಯ ಸುತ್ತಲಿನ ರಾಜಕೀಯ ದೊಂಬರಾಟ ಮತ್ತು ಶಾಸಕರ ಅನರ್ಹತೆ ಸುತ್ತ ನಡೆಯುತ್ತಿರುವ ಕಾನೂನು ಸಮರ ಮತ್ತಿತರ ಅಂಶಗಳನ್ನು ಗಮನಿಸಿದರೆ ರಾಜ್ಯ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿ
ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಕೆಪಿಸಿಸಿ ಸ್ವಾಗತಿಸುತ್ತದೆ. ಜನ ವಿರೋಧಿಯಾಗಿರುವ ಬಿಜೆಪಿ ಸರಕಾರ ತೊಲಗಬೇಕಾಗಿದೆ. ಆ ಮೂಲಕ ರಾಜ್ಯದ ಜನರ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ತಮ್ಮ ಆಶಯ ಎಂದು ಪರಮೇಶ್ವರ ಅನಿಸಿಕೆ ವ್ಯಕ್ತಪಡಿಸಿದರು.











Click it and Unblock the Notifications