ಪಟಾಕಿ ಸಂಭ್ರಮದ ಜೊತೆಗೆ ಎಚ್ಚರವೂ ಇರಲಿ

ಬೆಂಗಳೂರಿನಲ್ಲಿ ಪಟಾಕಿಗಳು ಭರದಿಂದ ಮಾರಾಟವಾಗುತ್ತಿವೆ. ಮಲ್ಲೇಶ್ವರಂ ಮೈದಾನ, ರಾಜಾಜಿನಗರದ ರಾಮಮಂದಿರ, ಜಯನಗರದ ಮೈದಾನಗಳಲ್ಲಿ ಪಟಾಕಿ ಅಂಗಡಿಗಳು ತಲೆಯೆತ್ತಿವೆ. ಜನತಾ ಬಜಾರ್ ನಲ್ಲಿ ಪಟಾಕಿಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಶೇ.70ರವರೆಗೂ ರಿಯಾಯಿತಿ ನೀಡಲಾಗುತ್ತಿದೆ ಎಂದು ಜನತಾ ಬಜಾರ್ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ತಿಳಿಸಿದ್ದಾರೆ.
ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಮೈಮರೆಯುವುದು ಬೇಡ. ನಿಮ್ಮ ಉದಾಸೀನತೆ ನಿಮಗೇ ಮುಳುವಾಗಬಹುದು ಅಥವಾ ಮತ್ತೊಬ್ಬರಿಗೆ ಅನಾಹುತಕಾರಿಯಾಗಬಹುದು. ಪಟಾಕಿಯಿಂದ ದೂರವಿರುವುದುದೇ ಕ್ಷೇಮ. ಪರಿಸರ ಮಾಲಿನ್ಯವನ್ನು ತಡೆಯಬಹುದು. ಪಟಾಕಿ ಹೊಡೆಯುವಾಗ ಈ ಕೆಳಗಿನ ಅಂಶಗಳು ನಿಮ್ಮ ಗಮನದಲ್ಲಿರಲಿ.
* ಗಾಜಿನ ಶೀಷೆಗಳಲ್ಲಿ ಪಟಾಕಿ ಸಿಡಿಸುವುದು ಬೇಡ
* ಪಟಾಕಿ ಹೊಡೆಯುವಾಗ ಮಕ್ಕಳೊಂದಿಗೆ ಪೋಷಕರು ಇರಲಿ
* ಕೈಯಲ್ಲಿ ಹಿಡಿದು ಪಟಾಕಿ ಹೊಡೆಯಬೇಡಿ
* ಪಟಾಕಿಯನ್ನು ಇನ್ನೊಬ್ಬರತ್ತ ಎಸೆಯಬೇಡಿ
* ಪಟಾಕಿ ಹೊಡೆಯುವಾಗ ಕಾಟನ್ ಬಟ್ಟೆ ಧರಿಸುವುದು ಉತ್ತಮ
* ಕಣ್ಣಿಗೆ ಕಿಡಿ ಬಿದ್ದರೆ ಉಜ್ಜಲು ಹೋಗಬೇಡಿ; ತಣ್ಣೀರು ಎರಚಿಕೊಳ್ಳಿ
ಪಟಾಕಿ ಸಿಡಿದು ಕಣ್ಣಿಗೆ ತೊಂದರೆಯಾದರೆ ಸಹಾಯವಾಣಿಗೆ ಕೂಡಲೆ ಕರೆಮಾಡಿ:
* ವಿಠಲ್ ಆಸ್ಪತ್ರೆ, ಹೊಸಕೆರೆಹಳ್ಳಿ 94490 32214, 94490 72214, (080) 2672 2214
* ಪ್ರಭಾ ಐ ಕ್ಲಿನಿಕ್, 8ನೇ ಬ್ಲಾಕ್, ಜಯನಗರ 98450 39005, (080) 2244 4131 ರಿಂದ 2244 4141ವರೆಗೆ.












Click it and Unblock the Notifications