ಒಬಾಮಾ ಪ್ರವಾಸ ಖರ್ಚು ದಿನಕ್ಕೆ 900 ಕೋ.ರು.
ನವದೆಹಲಿ,
ನ. 3 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾರತ ಪ್ರವಾಸ ವೇಳೆ ಅಮೆರಿಕ ದಿನಕ್ಕೆ 900 ಕೋಟಿ ರುಪಾಯಿ ವೆಚ್ಚ ಮಾಡಲಿದೆ. ಇದರಲ್ಲಿ ಹೆಚ್ಚಿನ ಹಣ ಭದ್ರತೆಗಾಗಿಯೇ ವಿನಿಯೋಗವಾಗಲಿದೆ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ. id="toptextpromo">ಅಮೆರಿಕದ
ಅಧಿಕಾರಿಗಳು, ಗೂಢಚಾರ ಏಜಂಟ್ ಗಳು, ಪತ್ರಕರ್ತರು ಸೇರಿ 3000 ಮಂದಿ ಒಬಾಮಾ ಜೊತೆ ಆಗಮಿಸಲಿದ್ದಾರೆ. ವಾರದ ಹಿಂದೆಯೇ ವೈಟ್ ಹೌಸ್ ಹಾಗೂ ಅಮೆರಿಕ ರಕ್ಷಣಾ ಇಲಾಖೆಯ ಅಧಿಕಾರಿಗಳ ದಂಡೇ ಭಾರತಕ್ಕೆ ಆಗಮಿಸಿದೆ. ಇವರು ತಮ್ಮೊಂದಿಗೆ ಹೆಲಿಕಾಪ್ಟರ್, ಉನ್ನತ ತಂತ್ರಜ್ಞಾನ ಹೊಂದಿರುವ ಉಪಕರಣಗಳನ್ನು ತೆಗೆದುಕೊಂಡು ಬಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಬಾಮಾ
ಅವರ ಭದ್ರತಾ ಸಿಬ್ಬಂದಿ ಬಿಟ್ಟರೆ ಅಧಿಕಾರಿಗಳಿಗೆ ಯಾವುದೇ ರೀತಿಯ ಆಯುಧಗಳನ್ನು ತರಲು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ. ನೌಕಾ ಮತ್ತು ವಾಯು ಸೇನೆಗೆ ಮುಂಬೈ ಸುತ್ತಮುತ್ತ ಭದ್ರತೆ ನೋಡಿಕೊಳ್ಳುವಂತೆ ಹೇಳಲಾಗಿದೆ. ಒಬಾಮಾ ಬರುವ ಅರ್ಧಗಂಟೆ ಮುಂಚೆ ಮುಂಬೈ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ತಿಳಿಸಿದೆ. ಅಂದಹಾಗೆ ನ.5ರಂದು ಬರಾಕ್ ಒಬಾಮಾ ಭಾರತಕ್ಕೆ ಬರಲಿದ್ದಾರೆ.











Click it and Unblock the Notifications