ತೀರ್ಪಿಗೆ ಸಿಎಂ ಹರ್ಷ, ಧರ್ಮಕ್ಕೆ ಜಯ : ಈಶ್ವರಪ್ಪ

ತೀರ್ಪು ಹೊರಬಿದ್ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡುವವರಿಗೆ ಇದೊಂದು ದೊಡ್ಡ ಪಾಠ. ಜನಾದೇಶದ ಸರಕಾರ ಪತನಗೊಳಿಸಲು ಅತೃಪ್ತ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸಿದ ಪ್ರತಿಪಕ್ಷಗಳ ಕ್ರಮ ಖಂಡನೀಯ. ಇನ್ನಾದರೂ ಸರಕಾರದ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದರು.
ಪ್ರಜಾಪ್ರಭುತ್ವ ದುರುಪಯೋಗ ಮಾಡಿಕೊಳ್ಳುವವರಿಗೆ ತಕ್ಕ ಶಾಸ್ತಿಯನ್ನ ಇಂದು ನ್ಯಾಯಾಲಯ ಕಲಿಸಿದೆ. ಸರಕಾರದ ಮೇಲೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ನ್ಯಾಯಾಲಯದ ತೀರ್ಪನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಸತ್ಯಕ್ಕೆ ಜಯ ದೊರೆತಿದೆ ಎಂದರು.
ಧರ್ಮಕ್ಕೆ ಜಯ : ಧರ್ಮಕ್ಕೆ ಜಯ ಸಿಕ್ಕಿದೆ. ಅಧರ್ಮಕ್ಕೆ ಸೋಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜನರಿಂದ ತಿರಸ್ಕಾರಕ್ಕೆ ಒಳಗಾದ ಪಕ್ಷಗಳು. ಹೀಗಿದ್ದೂ ಕೂಡಾ ಜನಾದೇಶದ ಮೇರೆಗೆ ಅಧಿಕಾರದಲ್ಲಿರುವ ಸರಕಾರವನ್ನು ಪತನಗೊಳಿಸಬೇಕು ಎಂದು ರೂಪಿಸಿದ್ದ ಸಂಚು ವಿಫಲವಾಗಿದೆ. ಇನ್ನಾದರೂ ಸರಕಾರ ಬೀಳಿಸಲು ಪ್ರಯತ್ನ ನಡೆಸಿದ ಮುಖಂಡರು ಸರಕಾರಕ್ಕೆ ಸಹಕಾರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.












Click it and Unblock the Notifications