ಬಿಎಂಟಿಸಿ ಬಸ್ಸಿನಲ್ಲಿ ಮೊಬಿಲಿಟಿ ಕಾರ್ಡ್ ಬಳಕೆಗೆ ಚಿಂತನೆ

ನಗರದಲ್ಲಿಂದು ವರದಿಗಾರರ ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 16 ಕೋಟಿ ರುಪಾಯಿ ವೆಚ್ಚದಲ್ಲಿ ಬಿಎಂಟಿಸಿಯ ಒಂದು ಸಾವಿರ ಬಸ್ ಗಳಿಗೆ ಮೊಬಿಲಿಟಿ ಕಾರ್ಡ್ ಸೌಲಭ್ಯವನ್ನು ಅಳವಡಿಸಲಾಗುತ್ತದೆ ಎಂದರು. ಎಟಿಎಂ ಮಾದರಿಯಲ್ಲಿರುವ ಕಾರ್ಡ್ ಗಳನ್ನು ಸ್ಕ್ರಾಚ್ ಮಾಡಿ ಬಸ್ ನಲ್ಲಿ ಪ್ರಯಾಣಿಸಬಹುದು. ಮೊಬೈಲ್ ಮಾದರಿಯಲ್ಲಿ ಈ ಕಾರ್ಡ್ ಗಳಿಗೆ ರೀಚಾರ್ಜ್ ಮಾಡಿಸಬಹುದು.
ಬೆಂಗಳೂರಿನಾದ್ಯಂತ 100 ರೀಚಾರ್ಜ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕಾರ್ಡ್ ಗಳನ್ನು ಬಳಸಿ ಮೆಟ್ರೋದಲ್ಲೂ ಪ್ರಯಾಣಿಸಬಹುದು ಹಾಗೂ ಪಾರ್ಕಿಂಗ್ ಶುಲ್ಕವನ್ನೂ ಪಾವತಿಸಬಹುದು. ಈ ಯೋಜನೆಗೆ ಕೇಂದ್ರ ಶೇ.35ರಷ್ಟು ಉಳಿದ ಶೇ.65ರಷ್ಟು ಹಣವನ್ನು ಬಿಎಂಟಿಸಿ ಭರಿಸಲಿದೆ ಎಂದು ಅಶೋಕ್ ವಿವರಿಸಿದರು.
ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ಸರಕಾರ ನಿರ್ಧರಿಸಿದೆ. ಈಗಿರುವ ತನಿಖಾ ಪದ್ದತಿಯಲ್ಲಿ ಲೋಪದೋಷಗಳಿದ್ದು, ಅದನ್ನು ಮಾರ್ಪಡಿಸಲಾಗುವುದು. ಪೊಲೀಸ್ ತರಬೇತಿ ಪಠ್ಯದಲ್ಲಿ ಸೈಬರ್ ಅಪರಾಧ, ನಕ್ಸಲ್ ಬಗ್ಗೆಯೂ ವಿಷಯಗಳನ್ನು ಅಳವಡಿಸಲಾಗುವುದು. ಲಾಕಪ್ ಡೆತ್ ಮತ್ತು ಪೊಲೀಸ್ ವರ್ಗಾವಣೆಗೆ ಹೊಸ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಅಶೋಕ್ ಹೇಳಿದರು.











Click it and Unblock the Notifications