ಬಿಜೆಪಿ ಶಾಸಕರ ಮನೆ ಮೇಲೆ ಐಟಿ ರೈಡ್
ಬೆಂಗಳೂರು,
ಅ. 25 : ಆಪರೇಷನ್ ಕಮಲದ ನಡುವೆಯೇ ಕೇಂದ್ರದ ಆದಾಯ ತೆರಿಗೆ ಅಧಿಕಾರಿಗಳು ಆರೋಗ್ಯ ಸಚಿವ ಬಿ ಶ್ರೀರಾಮುಲು ಸೇರಿದಂತೆ ಬಿಜೆಪಿ ಶಾಸಕರ ಮನೆ, ಕಚೇರಿ ಹಾಗೂ ಮೈನಿಂಗ್ ಕಂಪನಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಬೆಂಗಳೂರು, ಬಳ್ಳಾರಿ ಮತ್ತು ಹೊಸಪೇಟೆಯಲ್ಲಿರುವ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. id="toptextpromo">ರೇಸ್
ಕೋರ್ಸ್ ರಸ್ತೆಯಲ್ಲಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ಕಚೇರಿ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಹೊಸಪೇಟೆ ಮತ್ತು ಬಳ್ಳಾರಿಯಲ್ಲಿರುವ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಗಿ ಶಾಸಕ ನಾಗೇಂದ್ರ ಅವರ ನಿವಾಸ, ಕಚೇರಿ ಮೇಲೆಯೂ ದಾಳಿ ನಡೆಸಲಾಗಿದೆ. ಶಾಸಕರ ಭವನದ 333 ಮತ್ತು 330 ನಂಬರ್ ಕೊಠಡಿಗಳ ಮೇಲೂ ದಾಳಿ ನಡೆದಿದೆ. ಈ ಎರಡೂ ಕೊಠಡಿಗಳ ನಾಗೇಂದ್ರ ಮತ್ತು ಸುರೇಶಬಾಬು ಅವರ ಕೊಠಡಿಗಳಾಗಿವೆ. id='are-slot-1' class='oiad oi-axt oiadv'> id='top-searched-articles'>ಪ್ರವಾಸೋಧ್ಯಮ
ಸಚಿವ ಜನಾರ್ದನರೆಡ್ಡಿ ಅವರ ಆಪ್ತ ಸಹಾಯಕ ಅಲೀಖಾನ್, ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಮತ್ತು ರೆಡ್ಡಿ ವಕೀಲ ರಾಘವಾಚಾರ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಂಪ್ಲಿ ಶಾಸಕ ಸುರೇಶ್ ಬಾಬು ಅವರ ಸ್ವಗ್ರಾಮ ಬಳ್ಳಾರಿಯ ತಾಲ್ಲೂಕಿನ ಬಸವನಕುಂಟೆ ಗ್ರಾಮದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications