30 ಕಾಂಗ್ರೆಸ್ಸಿಗರ ಸಂಪರ್ಕಿಸಿದ ಬಿಜೆಪಿ : ಸಿದ್ದು ಆರೋಪ

ಶೋಭಾ ಕರಂದ್ಲಾಜೆ ನಮ್ಮ ಶಾಸಕರನ್ನು ಸಂಪರ್ಕಿಸಿದ್ದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಜೆಡಿಎಸ್ ಮಾಡಿದಂತೆ ವಿಡಿಯೋ ದಾಖಲೆಗಳಿಲ್ಲ, ಆದರೆ ಮೊಬೈಲಲ್ಲಿ ಸಂಭಾಷಣೆಗಳನ್ನು ದಾಖಲಿಸಿಕೊಂಡಿದ್ದೇವೆ. ಯಾರೋ ಒಂದಿಬ್ಬರು ಅಶಕ್ತ ಮನಸ್ಸಿನವರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಉಳಿದವರು ಪಕ್ಷ ಬಿಡಲ್ಲ ಎಂದು ಅಂದುಕೊಂಡಿದ್ದೇನೆ ಎಂದು ಅರ್ಧ ಆತ್ಮವಿಶ್ವಾಸದಿಂದ ಅರ್ಧ ನಿರಾಶೆಯಿಂದ ಹೇಳಿದರು.
ಆಪರೇಷನ್ ಕಮಲದ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರತಿಭಟಿಸಲು ನಾವು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇವೆ. ಯಡಿಯೂರಪ್ಪನವರದು ನಾಚಿಕೆಯಿಲ್ಲದ ಸರಕಾರ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ನಿಂತುಹೋಗಿದೆ. ಯಾವ ಶಾಸಕನೂ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಲಿಕಯ್ಯ ಗುತ್ತೇದಾರ್, ಚಿಂಚನಸೂರ್ ಮತ್ತು ರಾಜಶೇಖರ ಪಾಟೀಲ್ ಬಿಜೆಪಿ ಸೇರಿಕೊಂಡಿದ್ದಾರೆ ಎಂಬ ವರದಿಗಳು ದಿನಪತ್ರಿಕೆಯಲ್ಲಿ ಬಂದಿದೆ. ಅದೆಲ್ಲ ಸುಳ್ಳು. ಮೂವರೂ ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ಇನ್ನು ಮುಂದೆ ಆಪರೇಷನ್ ಕಮಲ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಹಿಂದೆ ಕೂಡ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ನಾನು ಯಾರನ್ನೂ ಸಂಪರ್ಕಿಸಿಲ್ಲ, ಇದಕ್ಕೆ ಸಿದ್ದರಾಮಯ್ಯನವರು ಬೇಕಿದ್ದರೆ ದಾಖಲೆ ಒದಗಿಸಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದರು. ಗುಬ್ಬಿಯಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ವಿಡಿಯೋ ಸಮೇತ ಸಿಕ್ಕಿಬಿದ್ದಿರುವ ಬಿಜೆಪಿ, ಮತ್ತೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7











Click it and Unblock the Notifications