ಸ್ವರ್ಣಮಂದಿರದತ್ತ ಒಬಾಮಾ ತಲೆಹಾಕಲ್ಲ
ನವದೆಹಲಿ,
ಅ.20: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂದಿನ ತಿಂಗಳು ತನ್ನ ಭಾರತ ಭೇಟಿ ಸಂದರ್ಭದಲ್ಲಿ ಅಮೃತಸರಕ್ಕೆ ಪ್ರಯಾಣಿಸುವುದಿಲ್ಲ. logistical issues(ಕ್ಲಿಷ್ಟ ವಿಷಯಗಳು) ಇದಕ್ಕೆ ಕಾರಣ ಎಂದು ಬಲ್ಲ ಮೂಲಗಳು ತಿಳಿಸಿವೆ. ನವೆಂಬರ್ 6ರಂದು ಮುಂಬೈಗೆ ಆಗಮಿಸಲಿರುವ ಒಬಾಮಾ ಅಲ್ಲಿ ಒಂದು ದಿನದ ವಾಸ್ತವ್ಯದ ನಂತರ ನೇರವಾಗಿ ದಿಲ್ಲಿಯನ್ನು ತಲುಪಲಿದ್ದಾರೆ. id="toptextpromo">ಈ
ಮೊದಲಿನ ಕಾರ್ಯಕ್ರಮದಂತೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಲು ಅವರು ಮುಂಬೈನಿಂದ ಅಮೃತಸರಕ್ಕೆ ತೆರಳಬೇಕಿತ್ತು. ಒಬಾಮಾ ಅಮೃತಸರ ಭೇಟಿಯನ್ನು ಕೈಬಿಡಲು ಕಾರಣವಾದ ಕ್ಲಿಷ್ಟ ವಿಷಯಗಳು ಯಾವುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸ್ವರ್ಣ ಮಂದಿರ ಭೇಟಿ ವೇಳೆ ಸಿಖ್ ಸಂಪ್ರದಾಯದ ತಲೆ ರುಮಾಲು ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣದಿಂದ ಒಬಾಮಾ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಒಬಾಮಾ
ಅವರ ಮಧ್ಯದ ಹೆಸರು ಹುಸೈನ್ ಎಂದಿದೆ. ಹಾಗಾಗಿ ಅವರಿಗಿರುವ ಮುಸ್ಲಿಂ ಸಮುದಾಯದ ಸಂಪರ್ಕದ ಬಗ್ಗೆ ಪ್ರಶ್ನೆಗಳು ಎದ್ದು ಕಾಡುತ್ತಿವೆ. ಸಿಖ್ ಸಮುದಾಯದ ಪೇಟ ಧರಿಸುವುದರಿಂದ ತಪ್ಪು ಗ್ರಹಿಕೆಗೆ ಅವಕಾಶ ನೀಡಬಾರದೆಂದು ಎಂದು ಒಬಾಮಾ ತಂಡ ನಿರ್ಧರಿಸಿದೆ. ಅಮೆರಿಕವು ಈ ಬದಲಾವಣೆಯ ಬಗ್ಗೆ ಭಾರತಕ್ಕೆ ವಿಧ್ಯುಕ್ತವಾಗಿ ತಿಳಿಸಿಲ್ಲವಾದರೂ, ಶೀಘ್ರವೇ ಅಂತಹುದೊಂದು ಮಾಹಿತಿಯನ್ನು ನೀಡುವ ನಿರೀಕ್ಷೆಯಿದೆ.











Click it and Unblock the Notifications