ಅನರ್ಹ ಶಾಸಕರ ವಿಚಾರಣೆ ಆರಂಭ

Karnataka High Court
ಬೆಂಗಳೂರು, ಅ. 20 : ಹನ್ನೊಂದು ಮಂದಿ ಬಿಜೆಪಿ ಶಾಸಕರ ಅನರ್ಹತೆ ಕುರಿತು ನ್ಯಾ. ವಿಜಿ ಸಭಾಹಿತ್ ಅವರಿರುವ ಏಕಸದಸ್ಯ ಪೀಠ ವಿಚಾರಣೆ ಆರಂಭಿಸಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ 11 ಮಂದಿ ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿರುವ ಆದೇಶ ಕುರಿತು ಮುಖ್ಯನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ನ್ಯಾ. ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಭಿನ್ನ ನಿಲುವು ವ್ಯಕ್ತಪಡಿಸಿದ್ದರಿಂದ ಏಕಸದಸ್ಯ ಪೀಠಕ್ಕೆ ಪ್ರಕರಣವನ್ನು ಶಿಫಾರಸ್ಸು ಮಾಡಲಾಗಿತ್ತು.

ಬಿಜೆಪಿ ಪರ ಮಾಜಿ ಅಟಾರ್ನಿ ಜನರಲ್ ಸೋಲಿ ಸೂರಾಬ್ಜಿ ಮತ್ತು ಸತ್ಯಪಾಲ್ ಜೈನ್ ವಾದಿಸುತ್ತಿದ್ದರೆ, ಅನರ್ಹಗೊಂಡಿರುವ ಶಾಸಕರ ಪರ ರಾಘವನ್ ಮತ್ತು ಆಚಾರ್ಯ ವಕಾಲತ್ತು ನಡೆಸಿದ್ದಾರೆ. ಬೆಳಗ್ಗೆ 10.30ಕ್ಕೆ ವಿಚಾರಣೆ ಆರಂಭವಾಗಿದೆ.

ಅನರ್ಹಗೊಂಡ ಶಾಸಕರ ಪಟ್ಟಿ

ಅರಭಾವಿ-ಬಾಲಚಂದ್ರ ಜಾರಕಿಹೊಳಿ, ಕಾಗವಾಡ-ಭರಮ ಗೌಡ ಕಾಗೆ, ಬಸವನ ಬಾಗೇವಾಡಿ- ಎಸ್.ಕೆ.ಬೆಳ್ಳುಬ್ಬಿ, ಇಂಡಿ-ಡಾ.ಸಾರ್ವಭೌಮ ಬಗಲಿ, ಕಾರವಾರ-ಆನಂದ್ ವಸಂತ ಅಸ್ನೋಟಿಕರ್, ದೇವದುರ್ಗ- ಕೆ.ಶಿವನ ಗೌಡ ನಾಯಕ್, ಸಾಗರ- ಗೋಪಾಲಕೃಷ್ಣ ಬೇಳೂರು, ಕೆಜಿಎಫ್-ವೈ.ಸಂಪಂಗಿ, ನೆಲಮಂಗಲ-ಎಂ.ವಿ.ನಾಗರಾಜು, ಚಾಮರಾಜನಗರ -ಎಚ್.ಎಸ್. ಶಂಕರಲಿಂಗೇಗೌಡ, ಕೊಳ್ಳೇಗಾಲ-ಜಿ. ಎನ್.ನಂಜುಂಡಸ್ವಾಮಿ,

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+