ವದಂತಿಗಳ ವಿರುದ್ಧ 'ಜ್ವಾಲಾ'ಮುಖಿ

ಮಾಜಿ ಕ್ರಿಕೆಟಿಗ ಮೊಹ್ಮದ್ ಅಜರುದ್ದೀನ್ ಅವರೊಂದಿಗೆ ಸಂಬಂಧವಿದೆ ಎಂದು ಹಬ್ಬಿಸುವವರ ಬಾಯಿಮುಚ್ಚಿಸಲೆಂದೇ ತಾವು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಛಲದಿಂದ ಹೋರಾಡಿ ಚಿನ್ನದ ಪದಕ ಗಳಿಸಿರುವುದಾಗಿ ಹೇಳಿದ್ದಾರೆ. ಕ್ರೀಡಾಕೂಟಕ್ಕೂ ಮುನ್ನ ದಿನಗಳಲ್ಲಿ ತಮ್ಮ ವೈಯಕ್ತಿಕ ಬದುಕಿನ ಕುರಿತ ಹಬ್ಬಿಸಲಾದ ಸುದ್ದಿಗಳಿಂದ ತಮಗೆ ತುಂಬಾ ನೋವಾಗಿದೆ. ಇದಕ್ಕೆಲ್ಲಾ ಆಂಧ್ರಪ್ರದೇಶ ಬ್ಯಾಡ್ಮಿಂಟನ್ ಸಂಸ್ಥೆ ಮೂಲ ಕಾರಣ ಎಂದು ಜ್ವಾಲಾ ದೂರಿದರು.
ನಾನು ಈಗ ಏನೆಂಬುದನ್ನು ತೋರಿಸಿದ್ದೇನೆ. ದೆಹಲಿ ಕ್ರೀಡಾಕೂಟದಲ್ಲಿ ನಾನು ಬಹಳ ಹಠದಿಂದ ಆಡಿದೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರ ಬಾಯಿ ಮುಚ್ಚಿಸಿದೆ ಎಂದು ಜ್ವಾಲಾ ಗುಟ್ಟಾ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೊತೆ ಮಹಿಳಾ ಬ್ಯಾಡ್ಮಿಂಟನ್ನಿನ ಡಬಲ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರೊಂದಿಗಿನ ಪ್ರೇಮ ಪ್ರಕರಣ ಬಹಿರಂಗಗೊಂಡ ನಂತರ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಪತಿ ಬ್ಯಾಡ್ಮಿಂಟನ್ ಪಟು 13 ನೇ ಶ್ರೇಯಾಂಕದ ಚೇತನ್ ಆನಂದ ಅವರೊಂದಿಗಿನ ಸಂಬಂಧ ಕಡಿದುಕೊಳ್ಳಲು ಗುಟ್ಟಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು.












Click it and Unblock the Notifications