ಮಾವೋವಾದಿಗಳು ಉಗ್ರರು : ಬುದ್ಧದೇವ್

ಸಿಪಿಎಂ ಕೇಂದ್ರ ಕಚೇರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಅರಣ್ಯ ಪ್ರದೇಶಗಳಲ್ಲಿ ಅವ್ಯಾಹತವಾಗಿ ಹತ್ಯೆಗಳನ್ನು ನಡೆಸುತ್ತಿರುವ ಸೋಗಲಾಡಿ ಮಾವೋಗಳಿಗೆ ಮಾವೋ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಅವರು ಭಯೋತ್ಪಾದಕರು ಎಂಬುದರಲ್ಲಿ ಯಾವುದೇ ಅನುಮಾನಗಳೂ ಇಲ್ಲ ಎಂದು ಅವರು ಪ್ರತಿಪಾದಿಸಿದರು.
ತೃಣಮೂಲ ಕಾಂಗ್ರೆಸ್ ನ ಸಮನ್ವಯತೆಯಿಂದಾಗಿ ಮಾವೊಗಳು ತಮ್ಮ ಹಿಡಿತದಲ್ಲಿರುವ ಜಂಗಲ್ ಮಹಲ್‌ನಲ್ಲಿ ಅರಾಜಕತೆ ಸೃಷ್ಟಿಸಿ ಅಲ್ಲಿನ ಶಾಂತಿಯನ್ನು ಕದಡುತ್ತಿದ್ದು, ತಮ್ಮ ಸರಕಾರ ಇನ್ನು ಮುಂದೆ ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದರು.
ಸಿಪಿಎಂ ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆಗೈಯಲು ಮಾವೋಗಳೊಂದಿಗೆ ಕೈ ಜೋಡಿಸಿರುವ ತೃಣಮೂಲ ಕಾಂಗ್ರೆಸ್, ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸಿಕೊಂಡು ಆ ಮೂಲಕ ರಾಜ್ಯದ ಅಧಿಕಾರ ಹಿಡಿಯಲು ಹೊರಟಿದ್ದು, ಅವರ ಈ ಕನಸು ನನಸಾಗದು ಎಂದರು.












Click it and Unblock the Notifications