ಸಾಯಿಬಾಬಾ ಗಾಳಿ ಆಂಜನೇಯನಿಗೆ ಅಡ್ಡಬಿದ್ದ ಯಡ್ಡಿ

ಮತ್ತೊಂದು ಬಾರಿ ವಿಶ್ವಾಸಮತ ಯಾಚಿಸಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೇಳಿಕೊಂಡ ಮೇಲೆ ಯಡಿಯೂರಪ್ಪ ಅವರು ಮತ್ತೊಮ್ಮೆ ವಿಧಾನಸಭೆಯಲ್ಲಿ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ವಿಶ್ವಾಸಮತ ಗಳಿಸುವುದು ತಮ್ಮೊಬ್ಬರ ಕೈಯಲ್ಲಿ ಮಾತ್ರ ಸಾಧ್ಯವಿಲ್ಲ ಎಂದು ಅರಿತಿರುವ ಯಡಿಯೂರಪ್ಪ ರಾಜಕೀಯವಾಗಿ ಎಲ್ಲಾ ತಂತ್ರಗಾರಿಕೆಗಳನ್ನು ಬಳಸುವುದರ ಜೊತೆಗೆ ದೇವರಲ್ಲಿಯೂ 'ಕಾಪಾಡಪ್ಪಾ' ಎಂದು ಮೊರೆ ಹೋಗಿದ್ದಾರೆ.
ಇಂದು ಬೆಳಿಗ್ಗೆ ಹಿತೈಷಿಗಳ ಸಮೇತರಾಗಿ ಯಡಿಯೂರಪ್ಪನವರು ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತ್ಯಾಗರಾಜನಗರದಲ್ಲಿರುವ ಶಿರಡಿ ಸಾಯಿಬಾಬಾ ಗುಡಿಗೂ ತೆರಳಿ ಅಡ್ಡ ಬಿದ್ದು ಬಂದಿದ್ದಾರೆ. ಗಾಳಿ ಆಂಜನೇಯ ಮತ್ತು ಶಿರಡಿ ಸಾಯಿಬಾಬಾ ಯಡಿಯೂರಪ್ಪನವರ ಸರಕಾರವನ್ನು ಉಳಿಸುವರೇ ಕಾದು ನೋಡೋಣ.
11ನೇ ತಾರೀಖಿನಂದು ಕೂಡ ಯಡಿಯೂರಪ್ಪನವರು ಸುಮಾರು ಅರ್ಧ ಡಜನ್ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಬೆಂಗಳೂರಿನ ದೇವಸ್ಥಾನವೊಂದರಲ್ಲಿ ತಾಯತ ಕೂಡ ಕಟ್ಟಿಸಿಕೊಂಡಿದ್ದರು.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications