ಬಡವಿದ್ಯಾರ್ಥಿ ಕನಸು ಈಡೇರಿಸಿದ ಸಿಎಂ

2ನೇ ಬಾರಿಗೆ ಸದನದಲ್ಲಿ ವಿಶ್ವಾಸಮತ ಕೋರುವುದಕ್ಕೆ ಮೊದಲು ಬೆಂಗಳೂರಿನಲ್ಲಿರುವ ಎಲ್ಲ ದೇವರು ದಿಂಡಿರುಗಳಿಗೆ ಸಾಷ್ಟಾಂಗ ಹಾಕಿತೊಡಗಿದ ಯಡಿಯೂರಪ್ಪ ಅವರಿಗೆ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಬಿಗಿ ಭದ್ರತೆ ನಡುವೆಯೂ ವಿಶ್ವನಾಥ ಎಂಬ ಬಾಲಕನೊಬ್ಬ ಸಿಎಂ ಅವರನ್ನು ಭೇಟಿ ಮಾಡಬೇಕು ಎಂದು ರಚ್ಚೆ ಹಿಡಿಯುತ್ತಾನೆ.
ಸಾಕಷ್ಟು ಭದ್ರತೆಯ ನಡುವೆ ಅಳುತ್ತಿರುವ ಬಾಲಕನನ್ನು ನೋಡಿದ ಮುಖ್ಯಮಂತ್ರಿಗಳು ಆತನ ಬಳಿ ತೆರಳಿ ಸಾಂತ್ವನ ಹೇಳುತ್ತಾರೆ. ನಂತರ ಬಾಲಕನ ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿಗಳು ಪೂಜೆ ಕೈಂಕರ್ಯಗಳನ್ನು ಈ ಬಾಲಕನೊಂದಿಗೆ ಮುಗಿಸುತ್ತಾರೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು ಎಂಬ ಬಾಲಕನ ಕನಸನ್ನು ಪೂರೈಸಿದ ಯಡಿಯೂರಪ್ಪ, ವಿಶ್ವನಾಥ ವಿದ್ಯಾಭ್ಯಾಸದ ಎಲ್ಲ ಖರ್ಚುವೆಚ್ಚಗಳನ್ನು ಭರಿಸುವುದರ ಜೊತೆಗೆ ಅಲ್ಲದೇ, ತಕ್ಷಣ ಆತನ ಆಕೌಂಟ್ ಗೆ 1 ಲಕ್ಷ ರುಪಾಯಿಗಳನ್ನು ಠೇವಣಿ ಇಡಲಾಗುವುದು ಎಂದು ಹೇಳಿದ್ದಾರೆ.
ಸಂಜೆ ತಮ್ಮ ಗೃಹ ಕಚೇರಿ ಕೃಷ್ಣಾಗೆ ವಿಶ್ವನಾಥನನ್ನು ಕರೆದುಕೊಂಡು ಬನ್ನಿ ಎಂದು ಅಲ್ಲಿದ್ದ ಬಿಜೆಪಿ ಕಾರ್ಪೋರೇಟರ್ ಗೆ ಸೂಚನೆ ನೀಡಿದರು. ಆದರೆ, ವಿಶ್ವನಾಥನನ್ನು ದತ್ತು ಪಡೆಯುವುದಾಗಿ ಒಂದು ಸಾರಿ ಅವರ ಬಾಯಿಂದ ಹೊರಬಂದಿತು. ಆದರೆ, ಆ ಬಗ್ಗೆ ಅಧಿಕೃತವಾಗಿ ತಿಳಿದಿಲ್ಲ. ವಿಶ್ವನಾಥ ನಗರದ ಬ್ಯಾಟರಾಯನಪುರದ ಸ್ಲಂ ನಿವಾಸಿಯಾಗಿದ್ದಾನೆ.












Click it and Unblock the Notifications