ಯಡಿಯೂರಪ್ಪಗೆ ದಿಗ್ಭ್ರಮೆ ತಂದ ರಾಜ್ಯಪಾಲರ ಕರೆ

Chief Minister BS Yeddyurappa
ಬೆಂಗಳೂರು, ಅ. 12 : ಕರ್ನಾಟಕ ವಿಧಾನಸಭೆಯಲ್ಲಿ ಅಕ್ಟೋಬರ್ 14ರಂದು ಬೆಳಿಗ್ಗೆ 11ಕ್ಕೆ ಮತ್ತೊಮ್ಮೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೇಳಿಕೊಂಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಶ್ಚರ್ಯ ಮತ್ತು ಆಘಾತ ತಂದಿದೆ.

ಅ.11ರಂದು ನಡೆದ ವಿದ್ಯಮಾನಗಳನ್ನು ಗಮನಿಸಿದ ನಂತರ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಅದರ ಮರುದಿನವೇ ಅನಿರೀಕ್ಷಿತವಾಗಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಯಡಿಯೂರಪ್ಪನವರಿಗೆ ಕೇಳಿಕೊಂಡಿದ್ದಾರೆ. ಇದು ಯಡಿಯೂರಪ್ಪನವರಿಗೆ ಕೂಡ ಅನಿರೀಕ್ಷಿತವೆ.

ಇದಕ್ಕೆ ನವದೆಹಲಿಯನ್ನು ತಲುಪಿರುವ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಇದು ನನಗೆ ಆಶ್ಚರ್ಯ ತಂದಿದೆ. ನಾವು ಅಕ್ಟೋಬರ್ 11ರಂದೇ ಬಹುಮತ ಸಾಬೀತುಪಡಿಸಿದ್ದೇವೆ. ಈಗ ಮತ್ತೇಕೆ ಬಹುಮತ ಸಾಬೀತು ಮಾಡಲು ಕೇಳಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ಪಕ್ಷದ ಹಿರಿಯ ನಾಯಕರೊಡನೆ ಮತ್ತು ವಕೀಲರೊಡನೆ ಪರಾಮರ್ಶಿಸಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಮತ್ತೊಮ್ಮೆ ಬಹುಮತ ಸಾಬೀತುಪಡಿಸುವುದು ಯಡಿಯೂರಪ್ಪಗೆ ಬೇಕಾಗಿರಲಿಲ್ಲ ಎಂಬುದು ಅವರ ಮಾತಿನಿಂದ ಸ್ಪಷ್ಟ.

ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ ಮೇಲೆ ಯಡಿಯೂರಪ್ಪನವರು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು, ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಲು ಇಡೀ ದಂಡಿನ ಜೊತೆಗೆ ಎರಡು ವಿಮಾನಗಳಲ್ಲಿ ದೆಹಲಿ ತಲುಪಿದ್ದಾರೆ. ಭಾರತದ ಇತಿಹಾಸದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ ನಂತರ ಬಹುಮತ ಸಾಬೀತುಪಡಿಸಲು ಕೋರಿದ್ದು ಇದೇ ಪ್ರಥಮ ಇರಬಹುದು. ರಾಜ್ಯಪಾಲರ ಈ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿಂದ ಬಿಜೆಪಿಗೆ ಮತ್ತೊಂದು ಅವಕಾಶ ನೀಡಲು ನಿರ್ದೇಶನ ಬಂದಿರುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+