ಕೇರಳ ತಳಿಪರಂಬು ರಾಜರಾಜೇಶ್ವರಿಗೆ ಅಡ್ಡಬಿದ್ದ ಯಡ್ಡಿ

ಶಾಸಕರಿಗೆ ನಾನಾ ಬಗೆಯ ಆಮಿಷ ಒಡ್ಡುವ, ನಾನಾ ಬ್ರಾಂಡಿನ ಬಿಸ್ಕತ್ತುಗಳನ್ನು ನೀಡುವ ಹುನ್ನಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತಾಕತ್ತಿದ್ದರೆ ಒಬ್ಬೇ ಒಬ್ಬ ಜಡಿಎಸ್ ಶಾಸಕನನ್ನು ತಮ್ಮತ್ತ ಸೆಳೆದುಕೊಳ್ಳಲಿ ನೋಡೋಣ ಎಂದು ಕುಮಾರಣ್ಣ ಸವಾಲು ಹಾಕಿದರು.
ಮುಂದೇನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ, ಕಾಂಗ್ರೆಸ್ಸಿನವರು ತಮ್ಮ ಮನೆ ಬಾಗಿಲು ತಟ್ಟಿಲ್ಲ. ನಾವಾಯಿತು ನಮ್ಮ ಪಾಡಾಯಿತು ಎಂದುಕೊಂಡು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದರು ಅವರು. ರಾಜ್ಯಕ್ಕೆ ಯಾವುದೋ ಶಾಪ ತಟ್ಟಿದೆ. ಆ ಶಾಪ ನಿವಾರಣೆ ಆಗಬೇಕೆಂಬುದೇ ತಮ್ಮ ಅದಮ್ಯ ಬಯಕೆ ಎಂದು ಎಚ್ ಡಿಕೆ ನುಡಿದರು.
ಅತ್ತ, ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು, "ನಾಳೆ ಪಾಡ್ಯಮಿ. ಪವಿತ್ರವಾದ ನವರಾತ್ರಿ ಆರಂಭ. ಈ ಸಂದರ್ಭದಲ್ಲಿ ತಾಯಿ ಚಾಮುಂಡಿ ನಮ್ಮನ್ನೆಲ್ಲ ಹರಸಲಿ. ನಾಡಿನ ಜನತೆಗೆ ಒಳ್ಳೆಯದಾಗಲಿ" ಎಂದು ದೈವೀಶಕ್ತಿಗೆ ಶರಣಾದವರಂತೆ ಮಾತನಾಡಿದರು. ಆನಂತರ ಕೇರಳಕ್ಕೆ ಸರಿದ ಕೇರಳದ ತಳಿಪರಂಬು ರಾಜರಾಜೇಶ್ವರಿ ದೇಗುಳದಲ್ಲಿ ಯಡ್ಡಿ ಪೂಜೆ ಪುನಸ್ಕಾರ ಸಲ್ಲಿಸಿದರು. ಅವರೊಂದಿಗೆ ಅವರ ಮಗ ರಾಘವೇಂದ್ರ ಇದ್ದರು.
ರೆಡ್ಡಿ ಸಹೋದರರು ಸೆಡ್ಡು ಹೊಡೆದರ ಪರಿಣಾಮ ಭಿನ್ನಮತ ಶಾಸಕರು ಹೈದರಾಬಾದಿನಲ್ಲಿ ಕುಳಿತು ಹಾವಳಿ ಮಾಡುತ್ತಿದ್ದ ಕಾಲದಲ್ಲಿ ಯಡ್ಡಿ ಸುಬ್ರಮಣ್ಯಕ್ಕೆ ತೆರಳಿ ತುಲಾಭಾರ ಸೇವೆ ಮಾಡಿ ಅಪಾಯದಿಂದ ಪಾರಾದದ್ದನ್ನು ಸ್ಮರಿಸಬಹುದಾಗಿದೆ. ಈ ಬಾರಿ ಅವರನ್ನು ತಳಿಪರಂಬು ರಾಜರಾಜೇಶ್ವರಿ ಕಾಪಾಡುವಳೇ, ಕಾದು ನೋಡಬೇಕು.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications