ಕಂಬಿ ಹಿಂದೆ ಖಾಯಂ ಆದ ಜ್ಯೂನಿಯರ್ ಕಟ್ಟಾ
ಬೆಂಗಳೂರು,
ಅ. 5 : ಕೆಐಎಡಿಬಿ ಭೂಸ್ವಾಧೀನ ಹಗರಣದ ಸಾಕ್ಷಿಗೆ ಲಂಚ ನೀಡುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ ಜಾಮೀನು ಅರ್ಜಿಯನ್ನು ನ್ಯಾಯಾಲಯ ಇಂದು ವಜಾಗೊಳಿಸಿದೆ. id="toptextpromo">ಜಗದೀಶ್
ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ 23ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಹಿಪ್ಪರಗಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲೋಕಾಯುಕ್ತ
ಪೊಲೀಸರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ಎನ್ ಹೆಗಡೆ, ಕಟ್ಟಾ ಜಗದೀಶ್ ಅವರು ಕೆಐಎಡಿಬಿ ಭೂಸ್ವಾಧೀನ ಹಗರಣದ ಪ್ರಮುಖ ಸಾಕ್ಷಿಗೆ ಲಂಚ ನೀಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ಸೋಮವಾರ ಮನವಿ ಮಾಡಿಕೊಂಡಿದ್ದರು.











Click it and Unblock the Notifications