ಸ್ತ್ರೀಲೋಲ, ಬಹುಪತ್ನಿ ವಲ್ಲಭ ವಂಚಕ ಶಿವ ಸೆರೆ

ತಾಲೂಕಿನ ಬನ್ನಿಕುಪ್ಪೆ ಬಳಿಯ ಅಂಕನಹಳ್ಳಿಯ ಶಿವಲಿಂಗಯ್ಯ ಒಂದಲ್ಲ ಎರಡಲ್ಲ ಅಂಥ ನಾಲ್ಕು ಮದುವೆಯಾಗಿ, ವಂಚನೆ ಮಾಡಿ ಭಾನುವಾರ ಸಿಕ್ಕಿಕೊಂಡಿದ್ದಾನೆ. ಈತನ ಬಹುಪತ್ನಿತ್ವದ ಮರ್ಮವನ್ನ ಅರಿತ ಚತುರ್ಥ ಪತ್ನಿ ಈತನ್ನು ಹಿಡಿದು ಕೈ ತುತ್ತಿನ ರುಚಿ ತೋರಿಸಿದ್ದಾಳೆ. ಆಕೆಯಿಂದ ಸಖತ್ ಏಟು ತಿಂದ ಶಿವಲಿಂಗಯ್ಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನಾನು ಇಬ್ಬರ ಹೆಂಡಿರ ಮುದ್ದಿನ ಗಂಡ ಅಷ್ಟೆ ಅಂತ ಶಿವಲಿಂಗಯ್ಯ ಹೇಳಿದ್ರೆ, ಹಾಗಾದ್ರೆ ನಾನೆಷ್ಟನೇಯವಳು ಅಂತ ಚತುರ್ಥ ಪತ್ನಿ ಪೊಲೀಸರು ಮತ್ತು ಆತನ ತವರಿನ ಜನತೆಯ ಸಮ್ಮುಖದಲ್ಲೇ ಬೆಂಡೆತ್ತಿದಳು.
ಸ್ತ್ರೀಭೂಪಾಲನ ಕತೆ ಹೀಗಿದೆ: ಅಂಕನಹಳ್ಳಿಯ ಶಿವಲಿಂಗಯ್ಯ (40) ಚನ್ನಪಟ್ಟಣದ ತಾಲೂಕಿನ ಮತ್ತೀಕೆರೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಹಲವಾರು ವರ್ಷಗಳ ಹಿಂದಯೇ ಈತ ಅಮಾನತುಗೊಂಡಿದ್ದಾನೆ.
ಸದ್ಯ ರಾಜ್ಯಾದ್ಯಾಂತ ಸಂಚಾರ ಮಾಡುವ ಶಿವಲಿಂಗಯ್ಯ ಆಯಾ ಪ್ರಾಂತ್ಯದಲ್ಲಿ ಹೆಚ್ಚು ಪ್ರಾಬಲ್ಯವನ್ನು ನೋಡಿಕೊಂಡು ನಾನು ನಿಮ್ಮ ಜಾತಿ ಸಮುದಾಯದವನು ಎಂದು ಹೇಳಿಕೊಂಡು ಅದೇ ಸಮುದಾಯದ ಮಹಿಳೆಯರನ್ನ ಮದುವೆಯಾಗಿದ್ದಾನೆ ಎನ್ನುವ ಆರೋಪ ಹೊತ್ತಿದ್ದಾನೆ.
ಕಳೆದ 15 ವರ್ಷಗಳ ಹಿಂದೆ ಸುಜಾತ ಎಂಬಾಕೆಯೊಂದಿಗೆ ವಿವಾಹವಾದ ಶಿವಲಿಂಗಯ್ಯ, ನಂತರ ಹಣವಿರುವ ಮತ್ತು ನೌಕರಿಯಲ್ಲಿರುವ ಮಹಿಳೆಯರನ್ನ ಮರಳು ಮಾಡಿ ಮದುವೆಯಾಗುವ 'ಕೃಷಿ' ಕಾಯಕ ಶುರುವಿಟ್ಟುಕೊಂಡಿದ್ದಾನೆ. ಸುಜಾತಳಿಗೆ ಮಗುವೊಂದನ್ನ ದಯಪಾಲಿಸಿದ ಶಿವಲಿಂಗಯ್ಯ, ನಂತರ ಶಿವಮೊಗ್ಗದ ಹೊಳಲೂರಿನ ಶಿಕ್ಷಕಿ ತಾರಾಳನ್ನ ಮದುವೆ ಮಾಡಿಕೊಂಡಿದ್ದಾನೆ. ತಾರ ಕೊಡಿಸಿದ ದುಡ್ಡಿನಲ್ಲೇ ಒಂದು ಪಲ್ಸರ್ ಬೈಕ್ ಗಿಟ್ಟಿಸಿಕೊಂಡಿದ್ದಾನೆ.
ಮೈಸೂರಿನ ಬ್ರೋಕರ್ ಜಾನಿ ಎಂಬಾತನ ಮೂಲಕ ಮಧು ಎಂಬುವಳನ್ನು ಸಂಪರ್ಕಿಸಿದ ಶಿವಲಿಂಗಯ್ಯ ವೀರಶೈವ ಸಮುದಾಯವೆಂದು ಹೇಳಿಕೊಂಡು ಮದುವೆಯ ಪ್ರಸ್ತಾಪ ಮಾಡಿದ. ನಾನು ಚನ್ನಪಟ್ಟಣ ಬಿಡಿಸಿಸಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದೇನೆಂದು ಹೇಳಿಕೊಂಡಿದ್ದ ಶಿವಲಿಂಗಯ್ಯ ನನಗೆ ಸಂಬಧಿಕರು ಹೆಚ್ಚಾಗಿಲ್ಲವೆಂದು ಹೇಳಿಕೊಂಡು ನನ್ನನ್ನು ನಂಬಿಸಿ ಮದುವೆಯಾದ ಎಂದು ವಂಚನೆಗೊಳಗಾಗಿರುವ ಮಧು ದೂರುತ್ತಾರೆ.
ಮಧುಳನ್ನು ಆಗಸ್ಟ್ ತಿಂಗಳಿನಲ್ಲಿ ಹೋಟೆಲ್ ಶೃಂಗಾರ್ ಇಂಟರ್‌ನ್ಯಾಷನಲ್ ವಿವಾಹವಾದ. ವಿವಾಹವಾದ ಒಂದು ವಾರದಲ್ಲೇ ಮಧು ಮನೆಯ ತಿಜೋರಿಯಲ್ಲಿದ್ದ 85 ಸಾವಿರ ಲಪಟಾಯಿಸಿ ಫಲಾಯನ ಮಾಡಿದ. ಶಿವಲಿಂಗಯ್ಯನ ನಡವಳಿಕೆಯಿಂದ ಅನುಮಾನಗೊಂಡು ಈತನ 'ಘನಚರಿತ್ರೆ'ಯನ್ನ ಮಧು ಹುಡುಕಿದಾಗಲೇ ಶಿವಲಿಂಗಯ್ಯ ಒಂದಲ್ಲ ಎರಡಲ್ಲ ನಾಲ್ಕೈದು ಮಹಿಳೆಯರಿಗೆ 'ಮದು'ವೇ ಹೆಸರಲ್ಲಿ ಉಂಡೆನಾಮ ಹಾಕಿದ್ದಾನೆಂದು ಖಚಿತ ಪಡಿಸಿಕೊಂಡಿದ್ದಾರೆ. ನಂತರ ಮೈಸೂರಿನ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿವಲಿಂಗಯ್ಯ ಭಾನುವಾರ ಅಂಕನಹಳ್ಳಿಯಲ್ಲೇ ಸಂಬಂಧಿಕರ ಪುಣ್ಯತಿಥಿ ಕಾರ್ಯ ಮುಗಿಸಿ ಹಿಂತಿರುಗುತ್ತಿದ್ದಂತೆ ಮೈಸೂರು ಪೊಲೀಸರು ಎರಡು ಗೂಸಾ ಬಿಟ್ಟು ಕಾರಿಗೆ ಹಾಕಿಕೊಂಡರು. ದಿಢೀರ್ ಬೆಳವಣಿಗೆಯಿಂದ ತಬ್ಬಿಬ್ಬಾದ ಸಂಬಂಧಿಕರು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಆತನನ್ನ ರಾಮನಗರ ಪೊಲೀಸ್ ಠಾಣೆಯ ಮುಂದೆ ಮೈಸೂರು ಪೊಲೀಸರು ಹಾಜರು ಪಡಿಸಿದ್ದರು.
ಅಯ್ಯೋ ನನಗೆ ಇಬ್ಬರೇ...!: ನನಗೆ ಇಬ್ಬರೇ ಹೆಂಡಿರು ಬೇರೆ ಯಾರು ಇಲ್ಲ. ಆದರೆ ಪಾರ್ಟ್ನರ್‌ಶಿಪ್‌ನಲ್ಲಿ ಪಲ್ಸರ್ ಬೈಕ್ ತೆಗೆದುಕೊಂಡಿದ್ದಾಗಿ ಶಿವಲಿಂಗಯ್ಯ ಹೇಳುತ್ತಾನೆ. ನನಗೆ ಸುಜಾತಳ ನಂತರ ತಾರಾಳೊಂದಿಗೆ ವಿವಾಹವಾಗಿದ್ದೇನೆ ಇಬ್ಬರಿಗೂ ಮಕ್ಕಳಿದ್ದಾರೆಂದು ಹೇಳುತ್ತಾನೆ. ಆದರೆ ವಾಸ್ತವವಾಗಿ ಶಿವಮೊಗ್ಗದ ಶಿಕ್ಷಕಿ ತಾರಾಳನ್ನ ಮದುವೆಯಾಗಿದ್ದಾನೆಯೇ ಹೊರತು ಮಕ್ಕಳಿಲ್ಲ ಎನ್ನುವುದು ಧೃಢಪಟ್ಟಿದೆ.
ಪತ್ರಿಕೆಗಳಲ್ಲಿ ಸೂಕ್ತ ವಧು ಬೇಕೆಂದು ಜಾಹೀರಾತು ನೀಡಿ ಜಾಹೀರಾತು ನೋಡಿ ಬರುವ ಹೆಣ್ಣು ಮಕ್ಕಳಿಗೆ ಕಾಳು ಹಾಕಿದ್ದಾನೆ. ಮೈಸೂರಿನ ಮಧು ಎಂಬಾಕೆಯೊಂದಿಗೆ ವಿವಾಹವಾಗಿರುವ ಫೋಟೋ ಮತ್ತು ವಿಡಿಯೋ ಸಿಡಿ ಕೂಡ ಇದೆ. ಆದರೆ ಮಧುವಿನೊಂದಿಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದೆಂದು ಸುಳ್ಳಿನ ಕಂತೆಯನ್ನೇ ಕಟ್ಟುತ್ತಾನೆ.
ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಧಿಕೃತವಾಗಿ ಶಿವಮೊಗ್ಗದ ಶಿಕ್ಷಕಿ ತಾರಾ ಮತ್ತು ಮಧು ಇಬ್ಬರನ್ನ ಒಂದು ತಿಂಗಳ ಅವಧಿಯಲ್ಲಿ ರಿಜಿಸ್ಟರ್ ಮಾಡಿಸಿ ವಿವಾಹವಾಗಿದ್ದಾನೆ. ಆದರೆ ಶಿಕ್ಷಕಿ ತಾರಾರನ್ನ 12 ವರ್ಷದ ಹಿಂದೆಯ ಮದುವೆಯಾಗಿದ್ದಾಗಿ ಹೇಳುತ್ತಾನೆ.
ಪೊಲೀಸರೆದುರೇ ತನ್ನ ಚತುರ್ಥ ಪತ್ನಿ ಮಧುವಿಗೆ ಆವಾಜ್ ಹಾಕಿ ಬಾಯಿ ಮುಚ್ಚಿಸುವ ಪ್ರಯತ್ನವನ್ನ ಮಾಡಿದ. ಆದರೆ ವಂಚನೆಗೊಳಗಾದ ಮಧು ಮಾತ್ರ ಶಿವಲಿಂಗನ ಆರ್ಭಟ ಅಬ್ಬರಕ್ಕೆ ಬಗ್ಗದೆ ತನ್ನ ವಂಚಕ ಪತಿ ಶಿವಲಿಂಗಯ್ಯನಿಗೆ ಮನಸೋ ಇಚ್ಛೆ ಸಹಸ್ರನಾಮಾರ್ಚನೆ ಮಾಡಿದರು.
ಸುಸ್ತಾದ ಪೊಲೀಸರು: ಬೆಳಿಗ್ಗೆಯಿಂದ ಶಿವಲಿಂಗಯ್ಯನನ್ನ ತಮ್ಮ ವಶಕ್ಕೆ ತೆಗೆದುಕೊಳ್ಳಲು ಮೈಸೂರು ಪೊಲೀಸರು ಸುಸ್ತಾಗಿ ಹೋಗಿದ್ದರು. ಶಿವಲಿಂಗಯ್ಯನ ಸಂಪೂರ್ಣ ಬಯೋಡೆಟಾ ಹೊರತೆಗೆಯಲು ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅರೇಳು ಮಂದಿ ಇದ್ದಾರಂತೆ?: ಚಿತ್ರದುರ್ಗ ತಾಲೂಕಿನಲ್ಲಿ ಶಿವಲಿಂಗಯ್ಯ ಮೂರನೇ ಮದುವೆಯಾಗಿದ್ದಾನೆ ಎಂದು ಹೆಳಲಾಗಿದೆ. ಶಿವಲಿಂಗಯ್ಯನ ತವರು ಅಂಕನಹಳ್ಳಿಯ ಕೆಲವು ಜನರು ಹೇಳುವಂತೆ ಈತ ಅರೇಳು ಮದುವೆಯಾಗಿದ್ದಾನೆ. ಈ ಹಿಂದೆ ಕೂಡ ಹಲವು ವಂಚನೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿಯನ್ನು ನೀಡುತ್ತಾರೆ. ಈ ಬಗ್ಗೆ ಮೈಸೂರು ಮತ್ತು ರಾಮನಗರ ಪೊಲೀಸರು ಈತ ನಿಖರವಾಗಿ ಆಗಿರುವ ಮದುವೆ ಏಷ್ಟು? ಏಲ್ಲೆಲ್ಲಿ ಯಾರ್‍ಯಾರನ್ನು ಮದುವೆಯಾಗಿದ್ದಾನೆ ಎನ್ನುವುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications