ವಿಜಯ್ ಕುಮಾರ್ ಸಿಆರ್ ಪಿಎಫ್ ಚೀಫ್

ಶ್ರೀವಾಸ್ತವ ಅವರನ್ನು ಈಗ ದಿಲ್ಲಿಯಲ್ಲಿರುವ ಪೊಲೀಸ್ ಸಂಶೋಧನೆ ಮತ್ತು ಅಭಿವೃದಿಟಛಿ ಬ್ಯೂರೋದ (ಬಿಪಿಆರ್‌ಡಿ) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಸಿಆರ್‌ಪಿಎಫ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಶ್ರೀವಾಸ್ತವ ಛತ್ತೀಸ್‌ಗಢದ ದಂತೇವಾಡದಲ್ಲಿ ಏಪ್ರಿಲ್ 6ರಂದು ನಡೆದ ಮಾವೋವಾದಿಗಳ ದಾಳಿಯಲ್ಲಿ 75 ಸಿಆರ್‌ಪಿಎಫ್ ಯೋಧರು ಹತ್ಯೆಗೀಡಾದ ನಂತರ ಕಟು ಟೀಕೆಗೆ ಒಳಗಾಗಿದ್ದರು.
ಉತ್ತರ ಪ್ರದೇಶದ 1973ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಶ್ರೀವಾಸ್ತವ ಬಿಪಿಆರ್‌ಡಿ ಮುಖ್ಯಸ್ಥರಾಗಿ ಪ್ರಸೂನ್ ಮುಖರ್ಜಿ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖರ್ಜಿ ಅವರು ಸೆ. 30ರಂದು ನಿವೃತ್ತರಾಗಿದ್ದಾರೆ. ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿಯಾದ 58 ವರ್ಷದ ವಿಜಯ್ ಕುಮಾರ್, ಕಾಡುಗಳ್ಳ ವೀರಪ್ಪನ್ ಹತ್ಯೆ ಕಾರ್ಯಾಚರಣೆ ನಡೆಸಿದ ವಿಶೇಷ ಕಾರ‍್ಯಪಡೆಯ ನೇತೃತ್ವ ವಹಿಸಿದ್ದರು.
ಕಾಶ್ಮೀರದಲ್ಲಿ ಬಿಎಸ್‌ಎಫ್‌ನ ಮಹಾನಿರೀಕ್ಷಕರಾಗಿ ಎರಡು ವರ್ಷ ಕಾಲ ಸೇವೆ ಸಲ್ಲಿಸಿದ್ದ ಅನುಭವವನ್ನೂ ಹೊಂದಿರುವ ವಿಜಯನ್, ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.












Click it and Unblock the Notifications