ಎಂದಿರನ್ ಸಿನಿಮಾ ಟಿಕೆಟ್ಟಿಗೆ ಹಾಹಾಕಾರ, ಲಾಠಿ ಛಾರ್ಜ್

ಅಯೋಧ್ಯೆ ಪ್ರಕರಣದ ತೀರ್ಪು ಹೊರಬಿದ್ದು ದೇಶವೆಲ್ಲ ಶಾಂತಿ ಮಂತ್ರ ಪಠಿಸುತ್ತಿರುವುದರಿಂದ ಇಂದೇ ಬಿಡುಗಡೆಯಾಗಿರುವ ಚಿತ್ರಕ್ಕೆ ಬೆಳಗಿನ ಆಟಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಟಿಕೆಟ್ಟುಗಳೆಲ್ಲ ಮೊದಲೇ ಬುಕ್ ಆಗಿದ್ದರಿಂದ ಜನ ಕಾಳಸಂತೆಯಲ್ಲಿ ಟಿಕೆಟ್ ಕೊಳ್ಳುತ್ತಿದ್ದಾರೆ. ಅತಿ ಕಡಿಮೆ ಎಂದರೆ 300 ರು.ಯಿಂದ ಹಿಡಿದು 1000 ರು.ವರೆಗೆ ಕಾಳಸಂತೆಯಲ್ಲಿ ಟಿಕೆಟ್ ಗಳು ಮಾರಾಟವಾಗುತ್ತಿವೆ ಎಂಬ ವರದಿ ಬಂದಿದೆ.
ನಟರಾಜ್ ಚಿತ್ರಮಂದಿರದ ಮುಂದೆ ಭಾರೀ ಜನಸಾಗರ ನೆರೆದಿದ್ದು ಭಾವೋತ್ಕರ್ಷಕ್ಕೆ ಒಳಗಾಗಿರುವ ಅಭಿಮಾನಿಗಳನ್ನು ಚೆದುರಿಸಲು ಪೊಲೀಸರು ಲಾಠಿ ಛಾರ್ಜ್ ಮಾಡಿದ್ದಾರೆ. ಕೆಲವರು ಗಾಯಗೊಂಡಿದ್ದರೂ, ಅಭಿಮಾನಿಗಳ ಉತ್ಸಾಹ ಎಳ್ಳಷ್ಟೂ ಕಡಿಮೆಯಾಗಿಲ್ಲ. ನಗರದಲ್ಲಿ ಒಟ್ಟು 20 ಚಿತ್ರಮಂದಿರಗಳಲ್ಲಿ ಎಂದಿರನ್ ಬಿಡುಗಡೆ ಭಾಗ್ಯ ಕಂಡಿದೆ. ರಾಜ್ಯದಲ್ಲಿ ಒಟ್ಟು 35 ಥಿಯೇಟರುಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ತೆಲುಗು ಅವತರಣಿಕೆ ನಾಲ್ಕು ಮಂದಿರಗಳಲ್ಲಿ ತೆರೆಕಂಡಿದೆ.
ಉಪೇಂದ್ರ ನಟಿಸಿದ್ದ ಕನ್ನಡ ಚಿತ್ರ ಹಾಲಿವುಡ್ ಚಿತ್ರದ ಕಥೆ ಹೋಲುವ ಎಂದಿರನ್ ಚಿತ್ರಕ್ಕೆ ರಜನಿ ಸ್ಟೈಲ್ ಮತ್ತು ರೊಬೊಟ್ ಚಮತ್ಕಾರವೇ ಜೀವಾಳ. ಎಂದಿರನ್ ಮೇನಿಯಾದಿಂದಾಗಿ ಕೆಲ ಚಿತ್ರಗಳು ಬಿಡುಗಡೆ ಮಾಡುವುದನ್ನು ಹಿಂದಕ್ಕೆ ತೆಗೆದುಕೊಂಡಿವೆ. ಆದರೆ, ಹೃದಯದಲಿ ಇದೇನಿದು ಮಾತ್ರ ಸಾಗರ್ ಮತ್ತಿತರ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications