ಪೊಲೀಸರ ಮೇಲೆ ಹಲ್ಲೆ ಮಾಡಿದ ಉಗ್ರ ಕಸಬ್
ಮುಂಬೈ,
ಸೆ. 28 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿ ಬಿದ್ದಿರುವ ಪಾಕಿಸ್ತಾನದ ಉಗ್ರ ಕಸಬ್ ಜೈಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತನ್ನ ವಕೀಲರೊಂದಿಗೆ ಮಾತನಾಡಲು ವಿರೋಧ ವ್ಯಕ್ತಪಡಿಸಿರುವುದನ್ನು ದಾಖಲು ಮಾಡಿಕೊಂಡಿರುವ ಸಿಸಿಟಿವಿಯ ತುಣುಕುಗಳಿರುವ ಸಿಡಿಯನ್ನು ಮಹಾರಾಷ್ಟ್ರ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿದೆ. id="toptextpromo">26/11ರ
ಮುಂಬೈ ದಾಳಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಂಗ ಕೊಠಡಿ ಹಾಗೂ ಜೈಲಿನಲ್ಲಿ ತನ್ನ ಕೋಪವನ್ನು ವ್ಯಕ್ತಪಡಿಸಿದ್ದ ಕಸಬ್, ಸೆಪ್ಟೆಂಬರ್ ಒಂದರಂದು ಜೈಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದನ್ನು ಆತನ ಕೊಠಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದಾಖಲಿಸಿಕೊಂಡಿದೆ. ಅದರ ತುಣುಕುಗಳನ್ನು ಸಿಡಿಯಲ್ಲಿ ದಾಖಲಿಸಿದ್ದು, ಇದನ್ನು ಸರಕಾರದ ವಕೀಲ ಉಜ್ವಲ್ ನಿಕಂ ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲ್ಲದೆ
ಜೈಲು ಸಿಬ್ಬಂದಿಯ ಕಣ್ಣಳತೆ ದೂರದಲ್ಲಿ ತನ್ನ ವಕೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಕಸಬ್ ನಿರಾಕರಿಸಿರುವ ಸಂಬಂಧ ಜೈಲು ಅಧೀಕ್ಷಕ ನೀಡಿರುವ ಪ್ರಮಾಣ ಪತ್ರವನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ ನಿಕಂ, ಕಸಬ್ ತರಬೇತಿ ಹೊಂದಿರುವ ಕಮಾಂಡ್ ಆಗಿರುವುದರಿಂದ ಆತ ತನ್ನ ಜೀವದ ಜೊತೆಗೆ ಸಿಬ್ಬಂದಿಯ ಜೀವಕ್ಕೂ ಅಪಾಯ ಎಸಗಬಹುದು ಎಂದಿದ್ದಾರೆ.











Click it and Unblock the Notifications