ಕಾಂಗ್ರೆಸ್ಸಿಗರಿಗೆ ರೋಗ ಬಂದಿದೆ : ವಿಶ್ವನಾಥ
ಬೆಂಗಳೂರು,
ಸೆ. 26 : ರಾಜ್ಯದ ಕಾಂಗ್ರೆಸ್ ಮುಖಂಡರು ರೋಗದಿಂದ ಬಳಲುತ್ತಿದ್ದು, ಎಲ್ಲರಿಗೂ ಚಿಕಿತ್ಸೆಯ ಅಗತ್ಯವಿದೆ ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ. ಚುನಾವಣೆಗಳಲ್ಲಿನ ಸತತ ಸೋಲುಗಳಿಂದ ಕಂಗೆಟ್ಟರೂ ಪಕ್ಷಕ್ಕೆ ಯಾವುದೇ ರೋಗ ಬಂದಿಲ್ಲ. ಆದರೆ, ಪಕ್ಷದ ಮುಖಂಡರಿಗೆ ಬಂದಿದೆ. ಇದು ಯಾವ ರೋಗ ಎಂಬುದನ್ನು ಕಂಡು ಹಿಡಿದು, ಸೂಕ್ತ ಚಿಕಿತ್ಸೆ ಪಡೆಯಬೇಕಿದೆ. id="toptextpromo">ಇದಕ್ಕಾಗಿ
ದಿಲ್ಲಿಯ ವರಿಷ್ಠರ ಕಡೆ ನೋಡಬೇಕಿಲ್ಲ. ನಮ್ಮಲ್ಲೇ ವೈದ್ಯರಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದರು. ಪರಸ್ಪರ ಕಾಲೆಳೆಯುವುದು, ಹಣ ಮಾಡುವುದು ಸೇರಿದಂತೆ ಕಾಯಿಲೆಗೆ ಬಗೆಬಗೆಯ ಲಕ್ಷಣಗಳನ್ನು ಗುರುತಿಸಬಹುದು. ಸೋಲಿಗೆ ಕಾರಣ ಏನೆಂಬುದರ ಬಗ್ಗೆ ಎಲ್ಲ ವರಿಷ್ಠರು ಒಟ್ಟಿಗೆ ಕುಳಿತು ಚರ್ಚಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸ್ಥಳೀಯವಾಗಿ ಚಿಂತನೆ, ಚರ್ಚೆ ನಡೆಸಿದರೆ ಹೈಕಮಾಂಡ್ ಬೇಡ ಎನ್ನದು. ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮೊದಲು ಈ ಕೆಲಸ ಮಾಡಲಿಎಂದು ಸಲಹೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ಮಂತ್ರಿ
ಮಗನನ್ನು ಬಂಧಿಸಿ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪರಿಹಾರ ವಿತರಣೆ ಹಗರಣದಲ್ಲಿ ಹಿರಿಯ ಅಧಿಕಾರಿಗಳು ಮಾತ್ರವಲ್ಲದೆ, ಪ್ರಭಾವಿ ಮಂತ್ರಿಯೊಬ್ಬರ ಮಗನು ಶಾಮೀಲಾಗಿದ್ದಾನೆ. ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಮಂತ್ರಿ ಮಗನನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದರು.











Click it and Unblock the Notifications