ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿ ಆಂಜನೇಯ ದೇಗುಲಕ್ಕೆ ನುಗ್ಗಿದ ಚರಂಡಿ ನೀರು

By Rajendra
|
Google Oneindia Kannada News

Gali Anjaneya Swami Temple
ಬೆಂಗಳೂರು, ಸೆ.25: ನಗರದಲ್ಲಿ ಬಿದ್ದ ಭಾರಿ ಮಳೆಗೆ ಮೈಸೂರು ರಸ್ತೆಯ ಇತಿಹಾಸ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇಗುಲಕ್ಕೆ ಚರಂಡಿ ನೀರು ನುಗ್ಗಿ ಮಲಿನವಾಗಿದೆ. ಗರ್ಭಗುಡಿಗೂ ಮಲಿನ ನೀರು ನುಗ್ಗಿದ್ದು ಅಸಂಖ್ಯಾತ ಭಕ್ತರ ಆಪದ್ಭಾಂದವ ಆಂಜನೇಯನಿಗೆ ಚಪ್ಪಲಿ, ಸತ್ತ ಮೀನುಗಳ ಸ್ಪರ್ಶವೂ ಆಗಿದೆ. ಆಲಯದ ಪೂಜಾ ಸಾಮಗ್ರಿಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ.

ಶುಕ್ರವಾರ ರಾತ್ರಿ ಸುರಿದ ಬಿಡು ಬೀಸಾದ ಮಳೆಗೆ ಗಾಳಿ ಆಂಜನೇಯ ದೇವಾಲಯಕ್ಕೆ ಚರಂಡಿ ನೀರು ನುಗ್ಗಿರುವುದು ಭಕ್ತರನ್ನು ಭಯ ಭೀತಗೊಳಿಸಿದೆ. ಆಲಯದ ಪಕ್ಕದಲ್ಲೇ ಇರುವ ದೊಡ್ಡ ಮೋರಿಯ (ವೃಷಭಾವತಿ ನದಿ ) ಹೊಲಸು ನೀರು ನುಗ್ಗಿ ಮಂದಿರವನ್ನ್ನು ಮಲಿನ ಮಾಡಿದೆ.

ಮೈಸೂರು ರಸ್ತೆಯಲ್ಲಿ ಎಂಥಹ ಮಳೆ ಬಿದ್ದರೂ ಗಾಳಿ ಆಂಜನೇಯ ದೇಗುಲಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಮಲ್ಲೇಶ್ವರ, ಬಸವನಗುಡಿಯಲ್ಲಿ ಮಳೆ ಒಂದು ಹದಹೆಚ್ಚಿಗೆ ಬಿತ್ತೆಂದರೆ ಸಾಕು ಗಾಳಿ ಆಂಜನೇಯ ದೇಗುವಕ್ಕೆ ನೀರು ನುಗ್ಗುತ್ತದೆ. ಬಸವನಗುಡಿ ಮತ್ತು ಮಲ್ಲೇಶ್ವರದ ಕಡೆಯಿಂದ ಬರುವ 2 ಕಾಲುವೆಗಳ ನೀರು ಸಂಗಮವಾಗುವುದು ಈ ದೇವಾಲಯದ ಬಳಿ.

ಎರಡು ಕಾಲುವೆಗಳು ಕೂಡುವ ಸ್ಥಳಕ್ಕಿಂತಲೂ ಆಂಜನೇಯ ದೇಗುಲ ತಳಮಟ್ಟದಲ್ಲಿದೆ. ಹಾಗಾಗಿ ನೀರು ನೇರವಾಗಿ ದೇವಾಲಯಕ್ಕೆ ನುಗ್ಗುತ್ತದೆ. ದೇವಲಾಯಕ್ಕೆ ನಿಷಿದ್ಧ ಎಂದು ಪರಿಗಣಿಸಿರುವ ವಸ್ತುಗಳೆಲ್ಲಾ ಮಳೆ ನೀರಿನ ಜೊತೆ ಕೊಚ್ಚಿಕೊಂಡು ಬಂದಿವೆ. ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾದ ಗಾಳಿ ಆಂಜನೇಯ ದೇಗುಲಕ್ಕೆ ನೀರು ನುಗ್ಗುತ್ತಿರುವುದು ಇದೇ ಮೊದಲಲ್ಲ. ಪ್ರತಿ ವರ್ಷವೂ ಹೀಗೇ ಆಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X