ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿಗರ ಕೈಗೆ ಮೊದಲ ಆಧಾರ್ ಚೀಟಿ

By Mahesh
|
Google Oneindia Kannada News

Mysore will be first to get UID numbers
ಮೈಸೂರು, ಸೆ.24: ದೇಶದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಪಡೆದವರಲ್ಲಿ ತಾವೇ ಮೊದಲಿಗರು ಎಂಬ ಹೆಗ್ಗಳಿಕೆ ಮೈಸೂರಿಗರ ಮುಡಿಗೇರಲಿದೆ. ಮಂಗಳೂರಿನ ಕಾರ್ಪ್ ಬ್ಯಾಂಕ್ ಆಧಾರ್ ಗುರುತಿನ ಚೀಟಿಗೆ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸುವ ಹೊಣೆ ಹೊತ್ತ ಮೇಲೆ ಕರ್ನಾಟಕಕ್ಕೆ ಮತ್ತೊಂದು ಗೌರವ ಲಭಿಸಿದೆ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಇದಕ್ಕಾಗಿ ತಾನು ರೂಪಿಸಿರುವ ವ್ಯವಸ್ಥೆಯನ್ನು ಏಪ್ರಿಲ್-ಮೇ ತಿಂಗಳಲ್ಲಿ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಒರೆಗೆ ಹಚ್ಚಿತ್ತು. ಇದೀಗ ಮೈಸೂರು ಜಿಲ್ಲಾಡಳಿತ ಕ್ರಿಯಾಯೋಜನೆಯೊಂದನ್ನು ರೂಪಿಸಿದ್ದು, ಪ್ರಾಧಿಕಾರ ಮತ್ತು ಕರ್ನಾಟಕ ಇ-ಆಡಳಿತ ಇಲಾಖೆ 12 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯಾದ ಆಧಾರ್ ಅನ್ನು ಅಕ್ಟೋಬರ್‌ನಲ್ಲಿ ನೀಡಲಿವೆ ಎಂದು ಪ್ರಾಧಿಕಾರದ ಉಪ ಮಹಾನಿರ್ದೇಶಕ ಅಶೋಕ್ ದಳವಾಯಿ ತಿಳಿಸಿದರು.

ಅಕ್ಟೋಬರ್ ಮಧ್ಯಭಾಗದಿಂದ ವಿಶಿಷ್ಟ ಗುರುತು ಸಂಖ್ಯೆ ನೀಡಿಕೆ ಪ್ರಕ್ರಿಯೆ ಆರಂಭಗೊಂಡು ವರ್ಷಾಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಏಕಕಾಲಕ್ಕೆ ತುಮಕೂರು ಜಿಲ್ಲೆಯ ಜನತೆ ಕೂಡ ವರ್ಷಾಂತ್ಯದೊಳಗೆ ತಮ್ಮ ವಿಶಿಷ್ಟ ಗುರುತು ಸಂಖ್ಯೆಯನ್ನು ಪಡೆಯಲಿದ್ದಾರೆ.

ಕರ್ನಾಟಕದಲ್ಲಿ ಅನುಸರಿಸಿದ ಶಿಷ್ಟಾಚಾರವನ್ನು ದೇಶದ ಉಳಿದೆಡೆ ಬಳಸಲಾಗುವುದು. ವರ್ಷಾಂತ್ಯಕ್ಕೆ ಅಧಾರ್ ಕಾರ್ಡ್ ಗಳು ಜನರ ಕೈಸೇರಲಿವೆ ಎಂದು ದಳವಾಳಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X