ಮಿಗ್ ವಿಮಾನ ಅಪಘಾತ; ಪೃಥ್ವಿ ಪರೀಕ್ಷೆ ವಿಫಲ

ಮಿಗ್ 27 ಯುದ್ಧ ವಿಮಾನ ಇಂದು ಬೆಳಗ್ಗೆ ಕಲೈಕುಂಡಾ ಏರ್ ಪೋರ್ಸ್ ಬೇಸ್ ನಿಂದ ಹೊರಟ 8.30 ರ ಸುಮಾರಿಗೆ ತಾಂತ್ರಿಕ ದೋಷ ಕಂಡು ಬಂದ ಕಾರಣ ದುರಿಯಾ ಗ್ರಾಮದ ಬಳಿ ನೆಲಕ್ಕುರುಳಿದೆ. ಆದರೆ, ಆಪಾಯದ ಮುನ್ಸೂಚನೆ ಅರಿತ ಪೈಲಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳದಿಂದ ಪೈಲಟ್ ಅನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದ ಜಲ್ ಪೈಗುರಿಯಲ್ಲಿ ಏ. 24 ರಂದು ಮಿಗ್ 27 ಇದೇ ರೀತಿ ಅಪಘಾತಕ್ಕೀಡಾಗಿತ್ತು.
ಪೃಥ್ವಿ ಕ್ಷಿಪಣಿ ಪರೀಕ್ಷೆ ವಿಫಲ: ಸುಮಾರು 500 ರಿಂದ 1000 ಕೆಜಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ಯುದ್ಧ ಕ್ಷಿಪಣಿ ಪೃಥ್ವಿ ಪರೀಕ್ಷೆ ವಿಫಲಗೊಂಡಿದೆ.ಒರಿಸ್ಸಾದ ಚಂದಿಪುರದಲ್ಲಿ 350 ಕಿ.ಮೀ ದೂರ ಚಿಮ್ಮಬಲ್ಲ ಪೃಥ್ವಿ-2 ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. ಈ ಮುಂಚೆ ಜು.18 ನಡೆಸಲಾಗಿದ್ದ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿತ್ತು.











Click it and Unblock the Notifications