ಶೋಭಾಗೆ ತುಮಕೂರು ಜಿಲ್ಲಾ ಉಸ್ತುವಾರಿ?

ಪ್ರತಿವಾರಜಿಲ್ಲೆಗಳಲ್ಲಿ ಅಭಿವೃದ್ಧಿ ಯೋಜನೆಗಳ ಕುರಿತು ಸಭೆ ನಡೆಸಿ ಅದನ್ನು ವರದಿ ಮಾಡುವಂತೆ ಮುಖ್ಯಮಂತ್ರಿಯವರು ಈಗಾಗಲೇ ಸಚಿವರಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಇದಕ್ಕಾಗಿ ಕೆಲವು ಸಚಿವರಿಗೆ ಹೊಸ ಜಿಲ್ಲೆಗಳ ಉಸ್ತುವಾರಿ ವಹಿಸುವ ಜತೆಗೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಮಂತ್ರಿಗಳಿಗೂ ಉಸ್ತುವಾರಿ ಹೊಣೆ ವಹಿಸಲು ಕಸರತ್ತು ನಡೆಸಿದ್ದಾರೆ. ಅದರಲ್ಲೂ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿರುವ ಅಶೋಕ್ ಮುಂತಾದವರ ಜೊತೆಗೆ ಹೊಸಬರಿಗೆ ಹೆಚ್ಚುವರಿ ಹೊಣೆಯನ್ನು ವಹಿಸಲಾಗುತ್ತದೆ.
ದಸರಾ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ತ್ವರಿತವಾಗಿ ನಡೆಸಬೇಕಿರುವ ಕಾರಣ ಮೈಸೂರು ಜಿಲ್ಲೆಯಿಂದ ಸಂಪುಟ ಸೇರಿರುವ ರಾಮದಾಸ್‌ಗೆ ಜಿಲ್ಲಾ ಉಸ್ತುವಾರಿಯ ಹೊಣೆ ಹೊರಿಸಲಾಗುತ್ತದೆ. ವಿಜಯಶಂಕರ್ ಅವರಿಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ನೀಡಲು ಯಡಿಯೂರಪ್ಪ ಮುಂದಾಗಿದ್ದಾರೆ.ಮತ್ತೆ ಸಂಪುಟ ಸೇರ್ಪಡೆಗೊಂಡಿರುವ ಇಂಧನ ಸಚಿವೆ ಶೋಭಾಕರಂದ್ಲಾಜೆಯವರಿಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಅದರಂತೆ ಆಹಾರ ಸಚಿವ ವಿ. ಸೋಮಣ್ಣ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ನೀಡುವ ವಿಚಾರವೂ ಪರಿಶೀಲನೆಯಲ್ಲಿದೆ. ಸಂಪುಟದಲ್ಲಿರುವ ಪಕ್ಷೇತರ ಸಚಿವರನ್ನೂ ಕೆಲವು ಜಿಲ್ಲೆಗಳ ಉಸ್ತುವಾರಿಗೆ ನೇಮಿಸುವಬಗ್ಗೆ ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ.ಅಧಿಕೃತ ಪಟ್ಟಿ ಇನ್ನೂ ಹೊರಬೀಳಬೇಕಾಗಿದೆ.
ಜಿಲ್ಲಾವಾರು ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ ವಿವರ ಇಂತಿದೆ:
* ಶಿವಮೊಗ್ಗ: ಬಿ.ಎಸ್ ಯಡಿಯೂರಪ್ಪ
* ಮೈಸೂರು:ಎ ರಾಮದಾಸ್
* ತುಮಕೂರು: ಶೋಭಾ ಕರಂದ್ಲಾಜೆ
* ಮಂಡ್ಯ-ಬೆಂಗಳೂರು ದಕ್ಷಿಣ : ಆರ್ ಅಶೋಕ್
* ಕೋಲಾರ: ಎಂಪಿ ರೇಣುಕಾಚಾರ್ಯ
* ಚಾಮರಾಜನಗರ : ವಿಜಯಶಂಕರ್
* ಚಿಕ್ಕಬಳ್ಳಾಪುರ: ಮುಮ್ತಾಜ್ ಅಲಿ ಖಾನ್
* ಧಾರವಾಡ: ಜಗದೀಶ್ ಶೆಟ್ಟರ್
* ಬೆಳಗಾವಿ: ಲಕ್ಷ್ಮಣ ಸವದಿ
* ಚಿಕ್ಕಮಗಳೂರು : ವಿ ಸೋಮಣ್ಣ
* ಮಂಗಳೂರು : ಕೃಷ್ಣಪಾಲೇಮಾರ್
* ಉಡುಪಿ: ವಿಎಸ್ ಆಚಾರ್ಯ
* ಕಾರವಾರ: ವಿಶ್ವೇಶ್ವರ ಹೆಗಡೆ ಕಾಗೇರಿ
* ಚಿತ್ರದುರ್ಗ : ಕರುಣಾಕರ ರೆಡ್ಡಿ
* ಗದಗ: ಶ್ರೀರಾಮುಲು
* ಬಳ್ಳಾರಿ: ಜನಾರ್ದನ ರೆಡ್ಡಿ
* ಬಾಗಲಕೋಟೆ: ಮುರುಗೇಶ್ ನಿರಾಣಿ
* ಬೀದರ: ಗೋವಿಂದ ಎಂ ಕಾರಜೋಳ
* ದಾವಣಗೆರೆ: ಎಸ್ ಎ ರವೀಂದ್ರನಾಥ್












Click it and Unblock the Notifications