ಶೋಭಾ, ಸೋಮಣ್ಣ, ಪಾಟೀಲ್ ಗೆ ಲಾಟ್ರಿ

Shobha Karandlaje
ಬೆಂಗಳೂರು, ಸೆ. 22 : ಶಾಸಕರ ಅಸಮಾಧಾನದ ನಡುವೆಯೇ ಇಂದು ರಾಜಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಆರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಹಂಸ್ ರಾಜ್ ಭಾರದ್ವಾಜ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಯುವಜನ ಮತ್ತು ಕ್ರೀಡಾ ಖಾತೆ ಸಚಿವ ಗೂಳಿಹಟ್ಟಿ ಶೇಖರ್, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮತ್ತು ಗ್ರಂಥಾಲಯ ಸಚಿವ ಶಿವನಗೌಡ ನಾಯಕ್ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಆದರೆ, ತೀವ್ರ ನಿರೀಕ್ಷೆ ಇಟ್ಟುಕೊಂಡು ಕವಿಕಾ ಸಂಸ್ಥೆಗೆ ರಾಜೀನಾಮೆ ನೀಡಿದ್ದ ಎಸ್ ಕೆ ಬೆಳ್ಳುಬ್ಬಿ ಅವರಿಗೆ ನಿರಾಸೆ ಉಂಟಾಗಿದೆ. ಅಪ್ಪಚ್ಚು ರಂಜನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೇಳೂರು ಹಾರಿಸಿದ ಬಾಂಬ್ ಗೆ ಯಡಿಯೂರಪ್ಪ ಬಗ್ಗಲಿಲ್ಲ. ಸಿಟಿ ರವಿ ಮುನಿಸಿಕೊಂಡು ಚಿಕ್ಕಮಗಳೂರಿನ ಕಡೆಗೆ ಹೆಜ್ಜೆ. ಶಂಕರಲಿಂಗೇಗೌಡರಿಗೆ ಕ್ಯಾರೇ ಎನ್ನದ ಬಿಜೆಪಿ. ಈ ಮಧ್ಯೆ ರೆಡ್ಡಿ ಮತ್ತು ಜಗದೀಶೆ ಶೆಟ್ಟರ್ ನಿವಾಸದಲ್ಲಿ ಸಭೆಯ ಮೇಲೆ ಸಭೆ ನಡೆಯುತ್ತಲೇ ಇವೆ. ಒಟ್ಟಿನಲ್ಲಿ ಸಂಪುಟ ವಿಸ್ತರಣೆಯಂತೂ ಕೊನೆಗೊಂಡಿದೆ. ಆದರೆ ಕಾವಂತೂ ಇನ್ನೂ ಆರಿಲ್ಲ.

ನೂತನ ಸಚಿವರ ಪಟ್ಟಿ

ಶೋಭಾ ಕರಂದ್ಲಾಜೆ (ಯಶವಂತಪುರ)
ಅನೇಕಲ್ ನಾರಾಯಣಸ್ವಾಮಿ (ಅನೇಕಲ್)
ರಾಮದಾಸ್ (ಕೃಷ್ಣರಾಜ ಕ್ಷೇತ್ರ)
ಸಿಸಿ ಪಾಟೀಲ್ (ನರಗುಂದ)
ವಿ ಸೋಮಣ್ಣ (ವಿಧಾನ ಪರಿಷತ್ ಸದಸ್ಯರು)- ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
ಸಿ ಎಚ್ ವಿಜಯಶಂಕರ್ (ವಿಧಾನ ಪರಿಷತ್ ಸದಸ್ಯರು)

ಈಶ್ವರಪ್ಪ ಹೇಳಿಕೆ

ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲ ಅಸಮಧಾನಗೊಂಡಿರುವುದು ನಿಜ. ಮುಂದಿನ 15 ದಿನಗಳೊಳಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು. ಪಕ್ಷ ಸಂಘಟನೆಯಲ್ಲಿ ಸಕ್ರಿಯಗೊಂಡಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಕೆಲ ಅಸಮಾಧಾನ ಇರುವುದು ನಿಜ. ಅದನ್ನೆಲ್ಲಾ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+