ಅಯೋಧ್ಯೆ ತೀರ್ಪು : ಮಾಧ್ಯಮಗಳಿಗೆ ಮಾರ್ಗಸೂಚಿ
ನವದೆಹಲಿ,
ಸೆ. 19 : ಅಯೋಧ್ಯೆ ವಿವಾದದ ತೀರ್ಪು ಪ್ರಕಟವಾಗುವ ದಿನ ಸನ್ನಿಹಿತವಾಗುತ್ತಿದ್ದಂತೆ ಸುದ್ದಿ ಪ್ರಸಾರಕರ ಸಂಘಟನೆ (ಎನ್‌ಬಿಎ) ವಿದ್ಯುನ್ಮಾನ ಮಾಧ್ಯಮ ಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. id="toptextpromo">ತೀರ್ಪು
ಘೋಷಣೆಯಾಗುವ ಮುನ್ನವೇ ಅದರ ಬಗ್ಗೆ ಊಹಾಪೋಹ ಗಳನ್ನು ಹಾಗೂ ಬಾಬರಿ ಮಸೀದಿ ಧ್ವಂಸದ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಸೂಚಿಸಿದೆ. ಅಯೋಧ್ಯೆ ಪ್ರಕರಣ ಸೂಕ್ಷ್ಮ ವಿಷಯವಾಗಿರುವುದರಿಂದ ಪ್ರಚೋದನಾಕಾರಿ ಹಾಗೂ ಕ್ಷೋಭೆಯನ್ನುಂಟು ಮಾಡುವ ಸುದ್ದಿಗಳನ್ನು ಪ್ರಸಾರ ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೋಮುಸಾಮರಸ್ಯವನ್ನು ಕಾಪಾಡುವ ಹಾಗೂ ಬಹುಸಂಸ್ಕೃತಿಯ ನಮ್ಮ ಸಮಾಜದ ಜಾತ್ಯತೀತ ವ್ಯವಸ್ಥೆ ಯನ್ನು ಸಂರಕ್ಷಿಸುವ ಉದ್ದೇಶದಿಂದ ಈ ಮಾರ್ಗಸೂಚಿಗಳ ನ್ನು ಪಾಲಿಸಬೇಕೆಂದು ಎನ್‌ಬಿಎ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ತೀರ್ಪಿಗೆ
ಸಂಬಂಧಿಸಿದಂತೆ ಬಾಬರಿ ಮಸೀದಿ ಧ್ವಂಸದ ದೃಶ್ಯವನ್ನು ಯಾವುದೇ ಸುದ್ದಿಯಲ್ಲಿ ಪ್ರಸಾರ ಮಾಡಬಾರದು. ತೀರ್ಪು ಪ್ರತಿಭಟಿಸುವ ಹಾಗೂ ಆಚರಿಸುವ ದೃಶ್ಯವನ್ನೂ ಪ್ರಸಾರ ಮಾಡಬಾರದೆಂದು ತಿಳಿಸಿದೆ. ಅಲಹಾಬಾದ್ ಹೈಕೋರ್ಟ್ ರಾಮಜನ್ಮಭೂಮಿ -ಬಾಬರಿ ಮಸೀದಿ ವಿವಾದ ತೀರ್ಪನ್ನು ಈ ತಿಂಗಳ 24ರಂದು ಪ್ರಕಟಿಸಲಿದೆ.











Click it and Unblock the Notifications