ಸಿಎಂ ಮಿತ್ತಲ್ ನಡುವೆ 500 ಕೋಟಿ ಕಳ್ಳ ಒಪ್ಪಂದ?

ಹೊಸದಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಾರುವ ಸಿಎಂ, 1200 ಅರ್ಜಿಗಳನ್ನು ಬದಿಗೊತ್ತಿ ಮಿತ್ತಲ್ ಅವರ ಕಂಪೆನಿಗೆ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಹೊರಟಿದ್ದಾರೆ. ಅದರ ಲೈಸನ್ ಸಂಬಂಧಿಸಿದಂತೆ 500 ಕೋಟಿ ರು ಡೀಲ್ ನಡೆದಿದೆ ಎಂದು ರೇವಣ್ಣ ಸುದ್ದಿಗಾರರಿಗೆ ತಿಳಿಸಿದರು.
ಚೀನಾದಿಂದ ಕರ್ನಾಟಕಕ್ಕೆ ಎಷ್ಟು ಬಂಡವಾಳ ಹರಿದು ಬರಲಿದೆ ಎಂಬುದನ್ನು ಸಿಎಂ ಮೊದಲು ತಿಳಿಸಲಿ. ಈ ಹೊಸ ಗಣಿಗಾರಿಕೆ ಅವವ್ಯಹಾರದ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು. ರಾಯಚೂರು ಶಾಖೋತ್ಪನ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಖರೀದಿಯಲ್ಲೂ ಅವ್ಯವಹಾರ ನಡೆದಿದೆ. ಎಲ್ಲಾ ಅವ್ಯವಹಾರಗಳಿಗೆ ಲೆಹರ್ ಸಿಂಗ್ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾನೆ ಎಂದು ರೇವಣ್ಣ ಹೇಳಿದರು.
ಆದರೆ, ಲೆಹರ್ ಸಿಂಗ್ ಯಾರು, ಬದಲಿ ಹೆಸರಿನಲ್ಲಿರುವ ಸಂಪುಟ ಸಚಿವರೇ, ಶಾಸಕರೇ ಅಥವಾ ಮೂರನೇ ವ್ಯಕ್ತಿಯೇ ಎಂಬ ಗುಟ್ಟನ್ನು ರೇವಣ್ಣ ಬಿಟ್ಟು ಕೊಡಲಿಲ್ಲ.











Click it and Unblock the Notifications