ಕಾಂಗ್ರೆಸ್ ನಾಯಕರು ತೀರ್ಥಯಾತ್ರೆಗೆ ಹೋಗಲಿ
ಬೆಂಗಳೂರು
ಸೆ 17: ಮುಖ್ಯಮಂತ್ರಿಗಳನ್ನು ಮನೆಗೆ ಕಳುಹಿಸುತ್ತೇವೆ, ಬಿಜೆಪಿ ಸರಕಾರವನ್ನು ಕಿತ್ತು ಹಾಕುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ನೋಡ್ರೀ ಉಪಚುನಾವಣೆಯಲ್ಲಿ ಏನಾಯಿತು? ಅವರು ಈಗ ಬಳ್ಳಾರಿಯಿಂದ ತೀರ್ಥಯಾತ್ರೆ ಆರಂಭಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. id="toptextpromo">ಗುಲ್ಬರ್ಗ
ಕ್ಷೇತ್ರದಲ್ಲಿ ಪಕ್ಷಕ್ಕಾದ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ತಿಳಿಯಿತು. ಅವರ ರಾಜೀನಾಮೆಯನ್ನು ನಾವು ಸ್ವಾಗತಿಸುತ್ತೇವೆ. ಮುಂದೆ ಯಾವ ಪಕ್ಷಕ್ಕೆ ಹೋಗುತ್ತಾರೋ, ಎಲ್ಲಿರುತ್ತಾರೋ ಆ ಭಗವಂತನೇ ಬಲ್ಲ ಎಂದ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇನ್ನು
ಮುಂದಾದರೂ ಕಾಂಗ್ರೆಸ್ ಪಕ್ಷದ ಧುರೀಣರು ಸರಕಾರದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಪಾದಯಾತ್ರೆಯ ಸಮಯದಲ್ಲಿ ಅವರಾಡಿದ ನಾಟಕವನ್ನು ಜನ ನೋಡಿದ್ದಾರೆ, ಯಾವ ಕೀಳು ಮಟ್ಟದ ಭಾಷೆಯನ್ನು ಅವರು ಬಳಸಿದ್ದಾರೆಂದು ಜನರಿಗೆ ತಿಳಿದಿದೆ. ಈಗ ಕಾಂಗ್ರೆಸ್ ನಾಯಕರು ವಿರಾಮವಾಗಿದ್ದಾರೆ. ಬಳ್ಳಾರಿಯಿಂದ ಮತ್ತೆ ಪಾದಯಾತ್ರೆ ಆರಂಭಿಸಲಿ ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.











Click it and Unblock the Notifications