ಅರುಣಾಗೆ ಅನುಕಂಪ ದತ್ತಾಗೆ ಭೂಕಂಪ

ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ 3,672 ಮತಗಳ ಅಂತರದಿಂದ ಬಿಜೆಪಿಯ ಶಶಿಲ್ ನಮೋಶಿ ಅವರನ್ನು ಸೋಲಿಸಿ ಅರುಣಾ ಪಾಟೀಲ್ ರೇವೂರ್ ಅವರು ಜಾತ್ಯಾತೀತ ಜನತಾದಳ ಪಕ್ಷಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾರೆ. ಅರುಣಾ ಪಾಟೀಲ್ ಅವರಿಗೆ 39, 339 ಮತಗಳು, ಅಜಯ್ ಕುಮಾರ್ ಸಿಂಗ್ ಗೆ 35,667 ಮತಗಳು ಹಾಗೂ ನಮೋಶಿಗೆ 35,031 ಮತಗಳು ಲಭಿಸಿವೆ.
ಇನ್ನೊಂದೆಡೆ ಜೆಡಿಎಸ್ ನ ವೈಎಸ್ ವಿ ದತ್ತಾರ ಗೆಲುವಿನ ಆಸೆ ಎರಡನೇ ಬಾರಿ ಭಗ್ನಗೊಳಿಸಿಂಡಿದ್ದು, ಬಿಜೆಪಿಯ ಡಾ. ವೈಸಿ ವಿಶ್ವನಾಥ್ ಅವರು ವಿಜಯೋತ್ಸವ ಆಚರಿಸುತ್ತಿದ್ದಾರೆ. 13,892 ಮತಗಳ ಅಂತರದಿಂದ ವಿಶ್ವನಾಥ್ ಭರ್ಜರಿ ಜಯ ದಾಖಲಿಸಿದ್ದಾರೆ. ಡಾ. ವಿಶ್ವನಾಥ್ ಅವರಿಗೆ 55,796 ಮತಗಳು ಲಭಿಸಿದ್ದು, ಜೆಡಿಎಸ್ ನ ವೈಎಸ್ ವಿ ದತ್ತಾಗೆ 41,899 ಮತಗಳು ಸಿಕ್ಕಿದೆ. ಪ್ರತಿಸ್ಪರ್ಧಿ ಕೆಂಪರಾಜ್ 30,330 ಮತಗಳನ್ನು ಗಳಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಶೂನ್ಯ ಸಂಪಾದನೆಯೊಂದಿಗೆ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ.
ತ್ವರಿತವಾಗಿ ಬಂದ ಫಲಿತಾಂಶ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಯಿತು. 14 ಟೇಬಲ್‌ಗಳ ಮೂಲಕ 16 ಸುತ್ತು ಮತ ಎಣಿಕೆ ನಡೆಸಲಾಯಿತು. ಇದಕ್ಕಾಗಿ 54 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಡೂರಿನಲ್ಲಿ ಮತ ಎಣಿಕೆ ಕಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಿತು ಎಂದು ಚುನಾವಣಾಧಿಕಾರಿ ಅಮರೇಶ್ ನಾಯಕ್ ತಿಳಿಸಿದರು.
ಗುಲ್ಬರ್ಗ ದ.ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್, ಬಿಜೆಪಿಯ ಶಶಿಲ್ ನಮೋಶಿ, ಜೆಡಿಎಸ್‌ನ ಅರುಣಾ ಪಾಟೀಲ್, ಕಡೂರು ಕ್ಷೇತ್ರದ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಕೆ.ಎಂ.ಕೆಂಪರಾಜ್, ಬಿಜೆಪಿಯ ಡಾ.ವಿಶ್ವನಾಥ್ ಮತ್ತು ಜೆಡಿಎಸ್‌ನ ವೈಎಸ್‌ವಿ ದತ್ತಾರ ರಾಜಕೀಯ ಭವಿಷ್ಯ ನಿರ್ಧಾರವಾಗಿದೆ. ಬಳ್ಳಾರಿ ಪಾದಯಾತ್ರೆಯ ಫಲ ಕಾಂಗ್ರೆಸ್ ಗೆ ಸಿಗಲಿಲ್. ಕಡೂರಲ್ಲಿ ಏಳದ ಅನುಂಪದ ಅಲೆ ಗುಲ್ಬರ್ಗಾದಲ್ಲಿ ಕೆಲಸ ಮಾಡಿದೆ.
ಎರಡೂ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೆರವಣಿಗೆ, ವಿಜಯೋತ್ಸವಕ್ಕೆ ನಿರ್ಬಂಧ ಹೇರಲಾಗಿದೆ. ಎರಡೂ ಕಡೆ ಭಾರಿ ಬೆಟ್ಟಿಂಗ್ ನಡೆದಿರುವುದರಿಂದ ಪೊಲೀಸ್ ಆಯಾಕಟ್ಟಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉಪಚುನಾವಣೆ ಅಂತಿಮ ಫಲಿತಾಂಶ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಗೆದ್ದವರಿಗೆ ಹೂಗುಚ್ಛ ಕಳಿಸಿ
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications