ಗೋವಿಂದರಾಜು ಬಿಬಿಎಂಪಿ ಸದಸ್ಯತ್ವ ಅಮಾನತು

BBMP
ಬೆಂಗಳೂರು, ಸೆ. 16 : ಬಿಬಿಎಂಪಿ ಸದಸ್ಯ ಎಲ್ ಗೋವಿಂದರಾಜು ಲಂಚ ಸ್ವೀಕಾರ ಪ್ರಕರಣ ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿರುವುದರಿಂದ ಸರಕಾರ ಅವರ ಸದಸ್ಯತ್ವವನ್ನು ತತ್ ಕ್ಷಣ ಅಮಾನತುಗೊಳಿಸಿದೆ.

ಪಾಲಿಕೆಯ ಇತಿಹಾಸದಲ್ಲಿ ಸದಸ್ಯರೊಬ್ಬರನ್ನು ಅಮಾನತು ಮಾಡಿರುವ ಪ್ರಥಮ ಪ್ರಕರಣ ಇದಾಗಿದೆ. ಹೀಗಾಗಿ ಗೋವಿಂದರಾಜು ಪಾಲಿಕೆ ಸಭೆ ಸೇರಿದಂತೆ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಗೋವಿಂದರಾಜು ಅವರ ಸದಸ್ಯತ್ವವನ್ನು ಅಮಾನತು ಮಾಡಿರುವ ಆದೇಶ ಸೆ 13 ರಂದು ಹೊರಬಿದ್ದಿದ್ದು, ಮುಂದಿನ ಆದೇಶದವರಿಗೆ ಅಮಾನತು ಮುಂದುವರಿಯುತ್ತದೆ.

ಗಣೇಶ ಮಂದಿರ ವಾರ್ಡಿನ ಸದಸ್ಯರಾಗಿದ್ದ ಗೋವಿಂದರಾಜು ಬನಶಂಕರಿ 2ನೇ ಹಂತದ ಅಕ್ಕಮಾಹಾದೇವಿ ರಸ್ತೆಯಲ್ಲಿ ಜೆ ಉದಯಕುಮಾರ್ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಯ ಸಂಬಂಧ 8 ಲಕ್ಷ ರುಪಾಯಿ ಲಂಚ ಕೇಳಿದ್ದರು. ಜುಲೈ 12 ರಂದು 2 ಲಕ್ಷ ರುಪಾಯಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.

ಗೋವಿಂದರಾಜು ತಮ್ಮ ಸ್ಥಾನದಲ್ಲಿಯೇ ಮುಂದುವರಿದರೆ ತನಿಖೆಯ ಹಾದಿ ತಪ್ಪಿಸುವ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಅವಕಾಶಗಳು ಇರುವುದರಿಂದ ಅವರನ್ನು ಅಮಾನತ್ತಿನಲ್ಲಿಡುವಂತೆ ಲೋಕಾಯುಕ್ತರು ಪೊಲೀಸರಿಗೆ ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+