ಬೇಳೂರು ಗೋಪಾಲಕೃಷ್ಣಂಗೆ ಮಂತ್ರಿ ಪಟ್ಟ ಬೇಕಂತೆ

"ನನಗೆ ಮಂತ್ರಿಯಾಗಲು ತನಗೆ ಎಲ್ಲ ರೀತಿಯ ಅರ್ಹತೆಯಿದೆ. ಖಾತೆ ನಿರ್ವಹಣೆ ಮಾಡುವ ಸಾಮರ್ಥ್ಯವಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ತನಗೆ ಮಂತ್ರಿ ಸ್ಥಾನ ನೀಡಲೇ ಬೇಕು. ಒಂದು ವೇಳೆ ನೀಡದಿದ್ದರೆ ಮುಂದಿನ ದಾರಿ ಗೊತ್ತಿದೆ...! " ಎಂದು ಬಹಿರಂಗ ಎಚ್ಚರಿಕೆ ನೀಡಿರುವ ಬೇಳೂರು, ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕರೆ ಯಾವ ತ್ಯಾಗಕ್ಕೆ ಬೇಕಾದರೂ ರೆಡಿ ಎಂದಿದ್ದಾರೆ.
ಗೋಪಾಲಕೃಷ್ಣ ಲೆಕ್ಕಾಚಾರ: ಶಿವಮೊಗ್ಗ, ಸಾಗರ ಕಡೆಯಲ್ಲಿ ಬಿಜೆಪಿ ಅಲೆ ಏಳಲು ಹಾಗೂ ಮುಖ್ಯಮಂತ್ರಿಗಳ ಮಗ ಬಿವೈ ರಾಘವೇಂದ್ರ ಸಂಸದರಾಗಲು ತಾವು ಹಾಗೂ ತಮ್ಮ ಬೆಂಬಲಿಗರು ಸಾಕಷ್ಟು ಬೆವರು ಹರಿಸಿದ್ದೇವೆ. ಹರತಾಳು ಹಾಲಪ್ಪಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಡಿಗ ಸಮುದಾಯಕ್ಕೆ ಸಂಪುಟದಲ್ಲಿ ಯಾವುದೇ ರೀತಿಯ ಸ್ಥಾನಮಾನ ಸಿಕ್ಕಿಲ್ಲ. ಶಿವಮೊಗ್ಗ ಜಿಲ್ಲೆಯ ಈಡಿಗ ಸಮುದಾಯದವರ ಬೆಂಬಲ ಹೀಗೆ ಸ್ಥಿರವಾಗಿರಬೇಕಾದರೆ ನಾನು ಮಂತ್ರಿಯಾಗಲೇ ಬೇಕು.
ಈಗೇನಾದರೂ ಈಡಿಗ ಸಮುದಾಯವನ್ನು ಕಡೆಗಾಣಿಸಿದರೆ, ಅದೇ ಸಮುದಾಯದ ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರು ಲಾಭ ಪಡೆಯುವುದು ಗ್ಯಾರಂಟಿ. ಶಿವಮೊಗ್ಗದಲ್ಲಿ ಈಡಿಗರ ಬೆಂಬಲ ಸಿಕ್ಕರೆ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರೆಸಬಹುದು.
ಸಚಿವರಾಗಿ ಏನು ಮಾಡುತ್ತೀರಾ ಎಂದರೆ ಮೊದಲು ಮಂತ್ರಿ ಮಾಡಲಿ ಮುಂದಿನದು ಆಮೇಲೆ ಎಂದು ಜಾರಿಕೊಂಡರು.ಈಡಿಗ ಸಮುದಾಯದ ಬೇರೆ ಶಾಸಕರಿಗೆ ಮಂತ್ರಿ ಪದವಿ ನೀಡುವ ಚಾನ್ಸ್ ಇಲ್ಲ. ನನ್ನ ಬಳಿ ಹಲವಾರು ಶಾಸಕರಿದ್ದಾರೆ ಎಂದರು. ಆದರೆ, ಸಂಖ್ಯೆಯನ್ನು ಸ್ಪಷ್ಟಪಡಿಸಲಿಲ್ಲ.
ಹಾಲಪ್ಪ ಅಭಿಮಾನಿಗಳ ಕಿಡಿ: ಆವೇಶದ ಬರದಲ್ಲಿ ಹಾಲಪ್ಪ ಅವರನ್ನು ಟೀಕಿಸಿರುವ ಗೋಪಾಲಕೃಷ್ಣ ಅವರು ಹಾಲಪ್ಪ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎಂದಿರುವುದನ್ನು ಸಹಿಸಿಕೊಳ್ಳಬಹುದು ಆದರೆ, ಹಾಲಪ್ಪ ನವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎನ್ನುವುದು ಸರಿಯಿಲ್ಲ ಎಂದು ಹಾಲಪ್ಪ ಅವರ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications